ಗಾಯಕಿ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪೊಲೀಸರು ದಾಳಿ ನಡೆಸಿ ಗಾಂಜಾ, ದೊಡ್ಡ ಪ್ರಮಾಣದ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ಮಂಗ್ಲಿ ಮಂಗಳವಾರ ರಾತ್ರಿ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಸ್ನೇಹಿತರಿಗಾಗಿ ಪಾರ್ಟಿಯನ್ನು ಆಯೋಜಿಸಿದ್ದರು. ಚೆವೆಲ್ಲಾದ ತ್ರಿಪುರ ರೆಸಾರ್ಟ್ ಮೇಲೆ ದಾಳಿ ನಡೆಸಿ ದೊಡ್ಡ ಪ್ರಮಾಣದ ವಿದೇಶಿ ಮದ್ಯ, ಗಾಂಜಾ ವಶಪಡಿಸಿಕೊಂಡಿದ್ದಾರೆ.
ಪಾರ್ಟಿಯಲ್ಲಿ ಅನೇಕ ಜನರ ಮೇಲೆ ಮಾದಕ ದ್ರವ್ಯ ಪರೀಕ್ಷೆಗಳನ್ನು ನಡೆಸಲಾಯಿತು. ವರದಿ ಪಾಸಿಟಿವ್ ಆಗಿತ್ತು. ಚೆವೆಲ್ಲಾ ಪೊಲೀಸರು ಗಾಂಜಾ ಸೇವಿಸಿದ್ದಕ್ಕಾಗಿ ಪಾಸಿಟಿವ್ ವರದಿಯನ್ನು ಪಡೆದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪಾರ್ಟಿ ವೇಳೆ ಮಂಗ್ಲಿ ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ‘ವಿಡಿಯೋ ಚಿತ್ರೀಕರಣ ಮಾಡದಂತೆ’ ಪೊಲೀಸರಿಗೆ ಆವಾಜ್ ಹಾಕಿದ ವಿಡಿಯೋ ವೈರಲ್ ಆಗಿದೆ. ಮಂಗ್ಲಿಅವರ ಮೇಲೆ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ.
ಮಂಗ್ಲಿ ತೆಲಂಗಾಣ ಜಾನಪದ ಗೀತೆಗಳಿಂದ ಜನಪ್ರಿಯರಾದರು. ಮಂಗ್ಲಿ ಹಾಡದ ಯಾವುದೇ ಹಾಡು ಇಲ್ಲ. ಬತುಕುಮ್ಮದಿಂದ ಬೋನಾಲಾ ಹಾಡುಗಳವರೆಗೆ ಅವರು ತಮ್ಮ ಧ್ವನಿಯಿಂದ ಮೋಡಿ ಮಾಡಿದ್ದಾರೆ. ಮಂಗ್ಲಿ ಅನೇಕ ಚಿತ್ರಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.
—-

Be the first to comment