ಡ್ರಗ್ಸ್ ವಿಚಾರದಲ್ಲಿ ಇಡೀ ಚಿತ್ರರಂಗವನ್ನು ದೂಷಿಸುವುದನ್ನು ನಿಲ್ಲಿಸಿ ನಟ ಯಶ್

ದೇಶದ ಗಮನ ಸೆಳೆದಿರುವ ಡ್ರಗ್ಸ್ ಡೀಲಿಂಗ್ ವಿಚಾರದಲ್ಲಿ ಇಡೀ ಚಿತ್ರರಂಗವನ್ನೇ ಅದರ ಬಲಿಪಶುವನ್ನಾಗಿಸುವುದು ಸರಿಯಲ್ಲ ಮಾಧ್ಯಮಗಳು ಆ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಲಿ ಎಂದು ನಟ ಯಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಯಶ್ ಡ್ರಗ್ಸ್ ಎನ್ನುವುದು ಸಮಾಜಕ್ಕೆ ಮಾರಕ, ಮಾದಕವಸ್ತುಗಳ ಸೇವೆ ಹಾಗೂ ಮಾರಾಟ ಎರಡೂ ಹಾನಿಕರ ಇದರ ಬಗ್ಗೆ ಎಲ್ಲರಿಗೂ ಆತಂಕವಿದೆ. ಇದನ್ನ ಮಟ್ಟಹಾಕಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

ಹಾಗೇ ಈ ವಿಚಾರಕ್ಕೆ ಸಬಂದಪಟ್ಟಂತೆ ಕೆಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ ಅದು ಅವರ ವೈಯುಕ್ತಿಕ ವಿಚಾರ ಕೆಲವರಿಂದಾಗಿರುವುದಕ್ಕೆ ಇಡೀ ಚಿತ್ರರಂಗವನ್ನೇ ದೂಷಿಸುವುದು ಸರಿಯಲ್ಲ ಎಂದು ಯಶ್ ತಿಳಿಸಿದರು.

ಇದೇ ವೇಳೇ ಯುವಜನರಿಗೆ ಕರೆ ನೀಡಿದ ಯಶ್ ಮಾದಕ ವಸ್ತುಗಳ ಬಳಕೆಯಿಂದ ಎಲ್ಲರೂ ದೂರವಿರಿ. ಈ ದೇಹ ಅಪ್ಪ ಅಮ್ಮ ಕೊಟ್ಟ ಬಿಕ್ಷೆ ಅವರ ನೆಮ್ಮದಿಗಾದರೂ ಅದನ್ನು ಚೆನ್ನಾಗಿಟ್ಟುಕೊಳ್ಳಿ, ಆ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು.

ಸಮಾಜದ ಓರ್ವ ಪ್ರಜೆಯಾಗಿ ನನಗೆ ಎಲ್ಲರ ಮೇಲೂ ಕಾಳಜಿ ಇದೆ, ಅದು ಚಿತ್ರರಂಗ ಮಾತ್ರವಲ್ಲ, ಪುಟ್ಟ ಮಗುವೂ ಮಾದಕ ವಸ್ತುವಿನ ಚಟಕ್ಕೆ,ಜಾಲಕ್ಕೆ ಬೀಳಾರದು, ಭವಿಷ್ಯದ ಪೀಳಿಗೆಯನ್ನು ನಾವು ವ್ಯಸನಮುಕ್ತವಾಗಿ ಬೆಳೆಸುವತ್ತ ಗಮನಹರಿಸಬೇಕು ಎಂದು ಯಶ್ ಸಾರ್ವಜನಿಕರಿಗೆ ಕರೆ ನೀಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!