ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಾರಕಾಸ್ತ್ರ ಚಿತ್ರ ಅಕ್ಟೋಬರ್ 6ರಂದು ತೆರೆಗೆ ಬರಲಿದೆ.
ಗುರುಮೂರ್ತಿ ಸುನಾಮಿ ನಿರ್ದೇಶನದ ಈ ಚಿತ್ರವನ್ನು ಕೋಮಲ ನಟರಾಜ್ ನಿರ್ಮಾಣ ಮಾಡಿದ್ದಾರೆ. ವಾಮಾಚಾರದ ಸುತ್ತ ಯುವ ಪ್ರೇಮಿಗಳ ಕಥೆಯನ್ನು ಚಿತ್ರ ಹೊಂದಿದೆ.
ಆರ್ಯ, ಹರ್ಷಿಕ ಪೂಣಚ್ಚ ಯುವ ಜೋಡಿ ಪಾತ್ರದಲ್ಲಿ ನಟಿಸಿದೆ. ಧನು ಕುಮಾರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ.
ವಿಶೇಷ ಚೇತನರಾಗಿರುವ ಗುರುಮೂರ್ತಿ ಸುನಾಮಿ ಅವರ ನಿರ್ದೇಶನದ ಈ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಶುಭ ಹಾರೈಸಿದ್ದಾರೆ.
ಚಿತ್ರದಲ್ಲಿ ದೊಡ್ಡ ತಾರಾ ಗಣ ನಟಿಸಿದೆ. ಮೈ ನವಿರೇಲಿಸುವ ಸಾಹಸ ದೃಶ್ಯಗಳನ್ನು ಸಂಯೋಜನೆ ಮಾಡಲಾಗಿದೆ. ಮಾಲಾಶ್ರೀ ಹೊಡೆದಾಟದ ದೃಶ್ಯಗಳಲ್ಲಿ ಅತ್ಯುತ್ತಮವಾಗಿ ಆಕ್ಟ್ ಮಾಡಿದ್ದಾರೆ.
ಈ ಚಿತ್ರ ಈಗಾಗಲೇ ಪರಭಾಷೆ ಡಬ್ಬಿಂಗ್ ಹಕ್ಕು ಮಾರಾಟದಲ್ಲಿ ಲಾಭ ಮಾಡಿಕೊಂಡಿದೆ. ಹಿಂದಿ ಭಾಷೆಯ ಡಬ್ಬಿಂಗ್ ರೈಟ್ಸ್ ಉತ್ತಮ ಬೆಲೆಗೆ ಮಾರಾಟವಾಗಿರುವುದು ಚಿತ್ರತಂಡದಲ್ಲಿ ಆತ್ಮವಿಶ್ವಾಸವನ್ನು ಉಂಟು ಮಾಡಿದೆ.
ಚಿತ್ರಕ್ಕೆ ಯಾವ ರೀತಿ ಪ್ರೇಕ್ಷಕರು ಸ್ಪಂದನೆ ನೀಡುತ್ತಾರೆ ಎನ್ನುವುದು ಕೆಲ ದಿನಗಳಲ್ಲಿ ಗೊತ್ತಾಗಲಿದೆ.
_____


Be the first to comment