ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಡಾ.ರಾಜ್ ಮೊಮ್ಮಗ,

ವರನಟ ರಾಜ್​ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್​ಕುಮಾರ್ ಕಿರಿಯ ಪುತ್ರ ಯುವರಾಜ್​ಕುಮಾರ್ ಬಾಲ್ಯದ ಗೆಳತಿ ಶ್ರೀದೇವಿ ಜೊತೆಯಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ಸಭಾಂಗಣದ ಮದುವೆ ಮಂಟಪ ರಂಗು ರಂಗಿನ ಬಿಳಿ, ಕೆಂಪು ‌ಹಾಗೂ ಹಸಿರಿನ ಚಿತ್ತಾರಗಳಿಂದ ಸಿಂಗಾರಗೊಂಡಿದೆ. ಮೈಸೂರಿನ ಮೂಲದ ಕುವರಿಯನ್ನು ರಾಘಣ್ಣ ದಂಪತಿ ಸೊಸೆಯನ್ನಾಗಿ ಬರಮಾಡಿಕೊಂಡಿದ್ದಾರೆ. ಇನ್ನು ಮದುವೆಗೆ ಭರ್ಜರಿ ಭೂರಿ ಭೋಜನ ಕೂಡ ಏರ್ಪಡಿಸಲಾಗಿದ್ದು ಸುಮಾರು 32 ಕ್ಕೂ ಹೆಚ್ಚು ರುಚಿಕರವಾದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗಿದೆ. ಗಣಪತಿ ಪೂಜೆ , ಗಂಗೆ ಪೂಜೆ, ಇತ್ಯಾದಿ ಶಾಸ್ತ್ರಗಳ ಮೂಲಕ ವಿವಾಹ ಸಾಂಗವಾಗಿ ನೆರವೇರಿದ್ದು ಸ್ಯಾಂಡಲ್​ವುಡ್ ತಾರೆಯರು, ಬಂಧುಗಳು ನವ ಜೋಡಿಗೆ ಶುಭಹಾರೈಸಿದ್ದಾರೆ.

ರಾಜ್ ಮೊಮ್ಮಗನ ಮದುವೆ ಆರತಕ್ಷತೆಗೆ ಸ್ಟಾರ್​ಗಳ ಎಂಟ್ರಿ..!
ಈಗಾಗಲೇ ಅದ್ಧೂರಿ ಮಂಟಪದಲ್ಲಿ ನವ ಜೋಡಿಯ ಮದುವೆ ಮುಹೂರ್ತ ಸಮಾರಂಭ ನೆರವೇರಿದ್ದು ಇಂದು ಸಂಜೆ ಸುಮಾರು 6ಕ್ಕೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಮೆಗಾಸ್ಟಾರ್​ ಚಿರಂಜೀವಿ, ಸೂಪರ್ ಸ್ಟಾರ್ ರಜಿನಿಕಾಂತ್, ಕಮಲ್​ ಹಾಸನ್​, ಜೂನಿಯರ್ ಎನ್​ಟಿ ಆರ್ ಸೇರಿದಂತೆ ಬಹುತೇಕ ಬಾಲಿವುಡ್​ನ ಖ್ಯಾತ ತಾರೆಯರು ಆಗಮಿಸಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!