ಏಪ್ರಿಲ್ 24, ಗಾನ ಗಂಧರ್ವ, ವರನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬ. ಆ ಶುಭದಿನದಂದು ವಿನಯ್ ವಾಸುದೇವ್ ನಿರ್ದೇಶನದ “ದಿ” ಸಿನಿಮಾದ ವತಿಯಿಂದ ಡಾ ರಾಜಕುಮಾರ್ ಸ್ಮಾರಕದ ಬಳಿ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹಸ್ರಾರು ಅಭಿಮಾನಿಗಳು ಇದರಲ್ಲಿ ಭಾಗಿಯಾಗಿದ್ದರು.
ಹೊಸ ಕನಸನ್ನು ಹೊತ್ತು ಬರುವ ನಮ್ಮಂತಹ ಹೊಸತಂಡಕ್ಕೆ ಡಾ||ರಾಜಕುಮಾರ್ ಅವರು ಆದರ್ಶ. ಅಂತಹ ಮೇರುನಟನ ಜನ್ಮದಿನದಂದು ನಮ್ಮ ಚಿತ್ರತಂಡದ ಸದಸ್ಯರೆಲ್ಲರೂ ಸೇರಿ ರಾಜಕುಮಾರ್ ಅವರ ಸ್ಮಾರಕದ ಬಳಿ ಅನ್ನದಾನ ಮಾಡುವ ಮೂಲಕ ಡಾ||ರಾಜಕುಮಾರ್ ಅವರ ಆಶೀರ್ವಾದ ಪಡೆದುಕೊಂಡೆವು ಎಂದು “ದಿ” ಚಿತ್ರದ ನಿರ್ದೇಶಕ ಹಾಗೂ ನಾಯಕ ವಿನಯ್ ವಾಸುದೇವ್ ತಿಳಿಸಿದ್ದಾರೆ. ಡಾಲಾ ಶರಣ್, ಅಭಯ್ ಗಣೇಶ್, ಸತೀಶ್ ಕುಮಾರ್ ಟಿ.ಎಲ್, ಛಾಯಾಗ್ರಾಹಕ ಅಲೆನ್ ಭರತ್ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವಿ.ಡಿ.ಕೆ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ದಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆಯ ಹಂತ ತಲುಪಿದೆ. ಅಲೆನ್ ಭರತ್ ಛಾಯಾಗ್ರಹಣ, ಯು.ಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ ಹಾಗೂ ಸಿದ್ದಾರ್ಥ್ ಆರ್ ನಾಯಕ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿನಯ್ ವಾಸುದೇವ್, ದಿಶಾ ರಮೇಶ್, ಹರಿಣಿ ಶ್ರೀಕಾಂತ್, ನಾಗೇಂದ್ರ ಅರಸ್, ಬಲಾ ರಾಜವಾಡಿ, ಕಾಮಿಡಿ ಕಿಲಾಡಿ ಚಂದ್ರು, ಡಾಲಾ ಶರಣ್, ಕಲಾರತಿ ಮಹಾದೇವ ಮುಂತಾದವರಿದ್ದಾರೆ.

Be the first to comment