“ಡಾ.ಅಭಿ 007” ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಿದ ಆಕ್ಷನ್ ಪ್ರಿನ್ಸ್

ಕೊರೋನ‌‌ ಹಾವಳಿ ಮುಗಿಯುತ್ತ ಬಂದಿದೆ‌.‌ ಕನ್ನಡ‌ ಚಿತ್ರರಂಗದಲ್ಲೂ ಸಾಲುಸಾಲು ಚಿತ್ರಗಳು ಆರಂಭವಾಗುತ್ತಿದೆ. ಈ ಪೈಕಿ “ಡಾ||ಅಭಿ 007” ಚಿತ್ರ ಸಹ ಒಂದು. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಆಕ್ಷನ್ ಪ್ರಿನ್ಸ್‌ ಧ್ರವ ಸರ್ಜಾ ಬಿಡುಗಡೆ ಮಾಡಿ ನಾಯಕ‌ ವಿಷ್ಣು ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ವಿಷ್ಣು ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಸಿನಿರಂಗ ಪ್ರವೇಶಿಸಿದ್ದಾರೆ.‌ ಈ ಹಿಂದೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ “ಜಗ್ಗುದಾದಾ” ಚಿತ್ರದಲ್ಲಿ ವಿಷ್ಣು ಅಭಿನಯಿಸಿದ್ದರು. ಮೂಲತಃ ವೈದ್ಯರಾಗಿರುವ ಡಾ||ವೆಂಕಟೇಶ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಕೆಲವು ವೆಬ್ ಸೀರಿಸ್ ಹಾಗೂ ಧಾರಾವಾಹಿಗಳಿಗೆ ಸಹಾಯಕ‌‌‌ ನಿರ್ದೇಶನ‌ ಮಾಡಿರುವ ಅನುಭವ ಇವರಿಗಿದೆ.

‌‌ ಹಿರಿತೆರೆಯಲ್ಲಿ ವೆಂಕಟೇಶ್ ಪ್ರಸಾದ್‌ ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.
ಆಕ್ಷನ್ ಥ್ರಿಲ್ಲರ್ ಕಾಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‌ಮೂರು‌ ಹಾಡುಗಳಿದ್ದು, ಯು.ವಿ.ಸ್ಟೆವೆನ್‌ ಸತೀಶ್ ಸಂಗೀತ ನೀಡುತ್ತಿದ್ದಾರೆ.‌ ಚೇತನ್ ಕುಮಾರ್ (ಭರ್ಜರಿ) ಗೀತರಚನೆ ಮಾಡಿದ್ದಾರೆ.

ಇನ್ ಫೆಂಟ್ ಭರತ್ ಛಾಯಾಗ್ರಹಣ, ಅರುಣ್ ರೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.‌ ಮೂರು ಸಾಹಸ‌ ಸನ್ನಿವೇಶಗಳಿದ್ದು, ಅರ್ಜುನ್ ರಾಜ್, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.‌

ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ವರ್ಧನ್, ಅದ್ವಿತಿ ಶೆಟ್ಟಿ, ಪ್ರಿಯಾಂಕ ಅರೋರ, ವೀಣಾ ಸುಂದರ್, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್, ನಾಗೇಂದ್ರ ಅರಸ್, ಬಲ ರಾಜವಾಡಿ, ಐಶ್ವರ್ಯ, ಶರ್ಮಿಳಾ, ಸುಚಿತ್, ಕುರಿ ರಂಗ, ಡಾ||ಸುಮಿತ್ ತಲ್ವಾರ್ ಮುಂತಾದವರಿದ್ದಾರೆ.

ಈಗಾಗಲೇ 35 ದಿನಗಳ ಕಾಲ‌ ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಇನ್ನೂ 15‌ದಿನಗಳ‌ ಚಿತ್ರೀಕರಣ ಬಾಕಿಯಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!