ನಟಿ ಪ್ರಿಯಾಮಣಿ ಸಿನಿ ಬದುಕಿನ 56ನೇ ಚಿತ್ರ ‘ಡಾ. 56’ ಡಿಸೆಂಬರ್ 9ರಂದು ಬಿಡುಗಡೆ ಆಗಲಿದೆ.
ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಸಸ್ಪೆನ್ಸ್, ಮರ್ಡರ್ ಮಿಸ್ಟ್ರಿ ಕತೆ ಇದೆ. ರಾಜೇಶ್ ಆನಂದಲೀಲಾ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರ ಇದು. ಇದರಲ್ಲಿ ಪ್ರಿಯಾಮಣಿ ಸಿಬಿಐ ಆಫೀಸರ್ ಆಗಿ ನಟಿಸುತ್ತಿದ್ದಾರೆ.
‘ಪ್ರಿಯಾಮಣಿಯವರು ಇದುವರೆಗೆ ಕಾಣಿಸಿಕೊಳ್ಳದ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರ ನಟನೆ ಎಕ್ಸ್ಟ್ರಾರ್ಡಿನರಿಯಾಗಿದೆ. ಇದುವರೆಗೆ ಕನ್ನಡದಲ್ಲಿ ಈ ರೀತಿಯ ಸೈನ್ಸ್ ಫಿಕ್ಷನ್ ಬಂದಿಲ್ಲ’ ಎನ್ನುವುದು ನಿರ್ದೇಶಕ ರಾಜೇಶ್ ಅವರ ಅಭಿಪ್ರಾಯ.
ಪ್ರಮುಖ ಪಾತ್ರದಲ್ಲಿ ಪ್ರವೀಣ್ ರೆಡ್ಡಿ ನಟಿಸಿದ್ದು, ಅವರೇ ಚಿತ್ರದ ಕತೆಯನ್ನೂ ಬರೆದಿದ್ದಾರೆ. 56ಕ್ಕೂ ನಾಯಕನಟನಿಗೂ ನಂಟು ಇದೆ. ‘ಪ್ರತಿ 56 ನಿಮಿಷಕ್ಕೆ ಒಂದು ಘಟನೆ ನಡೆಯುತ್ತಿರುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತಾನೆ ಎನ್ನುವುದು ಕುತೂಹಲಕಾರಿ ಅಂಶ’ ಎಂದಿದ್ದಾರೆ ನಿರ್ದೇಶಕರು.
‘ಜಗತ್ತಿನಾದ್ಯಂತ ಜನರು ಒಂದು ತಪ್ಪನ್ನು ಮಾಡುತ್ತಲೇ ಬಂದಿದ್ದಾರೆ. ಇದರಿಂದ ಸಫರ್ ಪಡುತ್ತಿದ್ದೇವೆ. ಇಂಥ ಹಲವು ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. 1956ರಿಂದಲೂ ಇದು ನಡೆಯುತ್ತಿದೆ. ಹಾಗಾಗಿ ಸಿನಿಮಾದ ಕತೆ ಕೂಡಾ 1956ರಿಂದ 2019ರವರೆಗೆ ಟ್ರಾವೆಲ್ ಮಾಡಲಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿ ಹೇಳುತ್ತಿದ್ದೇವೆ’ ಎನ್ನುವುದು ರಾಜೇಶ್ ಮಾತು.
__
Be the first to comment