ಬಹುಭಾಷಾ ನಟಿ ಪ್ರಿಯಾಮಣಿ ಹಾಗೂ ಪ್ರವೀಣ್ ರೆಡ್ಡಿ ನಟಿಸಿರುವ ಡಾ.56 ಚಿತ್ರ ಅಮೆಜಾನ್ ಒಟಿಟಿಯಲ್ಲಿ ಟಾಪ್ ಒನ್ ಆಗಿದೆ.
ಈ ಚಿತ್ರ ಮೆಡಿಕಲ್ ಮಾಫಿಯಾದ ಕಥಾಹಂದರವನ್ನು ಹೊಂದಿದೆ. ಚಿತ್ರ ಅಮೆಜಾನ್ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು ಉತ್ತಮ ರೇಟಿಂಗ್ ಪಡೆಯುವ ಜೊತೆಗೆ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
Watch Dr. 56 now in Amazon prime video
https://www.primevideo.com/detail/0T0PT42YMSHJCZMOZ6P1RWVP8W/ref=share_ios_movie
ವೈದ್ಯರುಗಳು ತಮ್ಮನ್ನು ದೇವರೆಂದು ನಂಬಿ ಬರುವ ರೋಗಿಗಳ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಸಾಮಾನ್ಯ ಜನರು ಕೂಡ ತಲೆನೋವು, ಜ್ವರಗಳಿಗೆ ಯಾವುದೋ ಮಾತ್ರೆಯನ್ನು ತೆಗೆದುಕೊಳ್ಳದೆ ಅದು ದೇಹದ ಮೇಲೆ ಬೀರುವ ಪರಿಣಾಮದ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಹೀಗೆ ಹಲವಾರು ವೈದ್ಯಕೀಯ ಸಂದೇಶಗಳನ್ನು ಹೇಳಿದ್ದ ಈ ಚಿತ್ರದಲ್ಲಿ ಪ್ರವೀಣ್ ರೆಡ್ಡಿ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದರು.
ಈ ಚಿತ್ರ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಚಿತ್ರತಂಡ ಸಾಕಷ್ಟು ಶ್ರಮವಹಿಸಿತ್ತು. ಚಿತ್ರವನ್ನು ಥಿಯೇಟರ್ ನಲ್ಲಿ ನೋಡಲು ಆಗದವರು ಈಗ ತಮ್ಮ ಮೊಬೈಲ್ ಮೂಲಕ ವೀಕ್ಷಿಸಲು ಅವಕಾಶ ಇದೆ ಎಂದು ನಿರ್ಮಾಪಕ ಹಾಗೂ ನಾಯಕ ನಟ ಆಗಿರುವ ಪ್ರವೀಣ್ ರೆಡ್ಡಿ ಹೇಳಿದ್ದಾರೆ.
ಚಿತ್ರದಲ್ಲಿ ಪ್ರವೀಣ್ ರೆಡ್ಡಿ ಅವರ ಜೊತೆಗೆ ಪ್ರಿಯಾಮಣಿ ಅವರ ನಟನೆ ಗಮನ ಸೆಳೆದಿತ್ತು. ಚಿತ್ರಕ್ಕೆ ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣ, ನೋಬಿನ ಪೌಲ್ ಅವರ ಸಂಗೀತ ನಿರ್ದೇಶನ ಇದೆ.
____


Be the first to comment