ಚಿತ್ರ : ಡಾ. 56
ನಿರ್ದೇಶಕ : ರಾಜೇಶ್ ಆನಂದಲೀಲಾ
ನಿರ್ಮಾಪಕ : ಪ್ರವೀಣ್ ರೆಡ್ಡಿ
ತಾರಾಗಣ : ಪ್ರಿಯಮಣಿ, ಪ್ರವೀಣ್, ಯತಿರಾಜ್, ವೀಣಾಪನ್ನಪ್ಪ , ದೀಪಕ್ ಶೆಟ್ಟಿ, ರಮೇಶ್ ಭಟ್ ಮುಂತಾದವರು
ರೇಟಿಂಗ್: 3.5/5
ಮೆಡಿಕಲ್ ಸೈನ್ಸ್ ಮಾಫಿಯಾದ ಒಳಗುಟ್ಟು ರಟ್ಟು ಮಾಡುವ ಡಾ. 56 ಚಿತ್ರ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತದೆ. ವೈದ್ಯಕೀಯ ವಿಜ್ಞಾನದ ಎಳೆಯಲ್ಲಿ ಮರ್ಡರ್ ಮಿಸ್ಟರಿಯ ಕಥೆಯನ್ನು ಬೆಸೆದುಕೊಂಡು ಸಿದ್ಧಪಡಿಸುತ್ತಿರುವ ಈ ಚಿತ್ರವು ಆಕ್ಷನ್, ಸಸ್ಪೆನ್ಸ್ ಅಂಶ ಹೊಂದಿದೆ.
ನ್ಯುರೋ ಸರ್ಜನ್ ಡಾಕ್ಟರ್ ನಂದಿನಿ, ಡಾಕ್ಟರ್ ಚಂದ್ರು ನಿಗೂಢbಕೊಲೆಯ ಪ್ರಕರಣಕ್ಕಾಗಿ ಇನ್ವೆಸ್ಟಿಗೇಷನ್ ಅಧಿಕಾರಿ ಪ್ರಿಯಾ (ಪ್ರಿಯಾಮಣಿ) ಕೊಲೆಗಾರನ ಹಿಡಿಯಲು ಒಂದು ತಂಡವನ್ನು ರಚಿಸಿ ಮುಂದಾಗುತ್ತಾಳೆ. ಸಿಸಿಟಿವಿ ದೃಶ್ಯಗಳನ್ನ ಕಲೆ ಹಾಕುವ ಮೂಲಕ ಕೊಲೆಗಾರನ ಸಂಚಿನ ರೂಪ ಒಂದೇ ಎಂದು ತಿಳಿದು ಮೂರನೇ ಕೊಲೆ ನಡೆಯುವಷ್ಟರಲ್ಲಿ ಪೊಲೀಸ್ ಅಧಿಕಾರಿ ಪ್ರಿಯಾ ಹಾಗೂ ಅವರ ತಂಡ ಅನಾರೋಗ್ಯ ಪೀಡಿತ ಅರ್ಜುನ್ ನನ್ನ ಸೆರೆ ಹಿಡಿಯುತ್ತಾರೆ.
ನಾಯಕ ಅರ್ಜುನ್ ತನ್ನ ಚಿಕಿತ್ಸೆಗಾಗಿ ಅನುಭವಿ ಸರ್ಜನ್ ಗಳನ್ನು ಭೇಟಿ ಮಾಡಲು ಬಂದಿದ್ದೆ. ನನಗೂ ಕೊಲೆಗಳಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳುತ್ತಾನೆ. ಮನುಷ್ಯನ ಮೇಲಿನ ಡ್ರಗ್ಸ್ ಪ್ರಾಯೋಗಿಕ ಪರೀಕ್ಷೆಯ ಜೊತೆಗೆ ಕೊಲೆಯ ರಹಸ್ಯ ಬೇಧಿಸುವ ಬಗ್ಗೆ ಚಿತ್ರವನ್ನು ನೋಡಬೇಕು.
ಕಥೆ, ಚಿತ್ರಕಥೆ, ಬರೆದು ನಿರ್ಮಿಸುವುದರ ಜೊತೆಗೆ ನಟಿಸಿ ಪ್ರವೀಣ್ ರೆಡ್ಡಿ ಗಮನ ಸೆಳೆದಿದ್ದಾರೆ. ಆಕ್ಷನ್ ದೃಶ್ಯಗಳನ್ನು ಖಡಕ್ಕಾಗಿ ಮಾಡಿದ್ದಾರೆ. ಸಿಬಿಐ ಸ್ಪೆಷಲ್ ಇನ್ವೆಸ್ಟಿಗೇಷನ್ ಅಧಿಕಾರಿಯಾಗಿ ನಟಿ ಪ್ರಿಯಾಮಣಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಯತಿರಾಜ್ ಕೂಡ ಗಮನ ಸೆಳೆಯುತ್ತಾರೆ. ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಹಕಾರ ನೀಡಿದ್ದಾರೆ.
ಛಾಯಾಗ್ರಹಕ ರಾಕೇಶ್ ಸಿ. ತಿಲಕ್ ತಮ್ಮ ಕ್ಯಾಮರಾ ಕೈಚಳಕದಲ್ಲಿ ಗೆದ್ದಿದ್ದಾರೆ. ಸಂಗೀತ ನಿರ್ದೇಶಕ ನೋಬಿನ್ ಪೌಲ್ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ವಿಶ್ವ ಸಂಕಲನ, ಶಂಕರ್ ಸಂಭಾಷಣೆ, ವಿಕ್ರಂ ಮೋರ್ ಸಾಹಸ ಓಕೆ ಅನಿಸುತ್ತದೆ.
ಮನುಷ್ಯನ ಮೇಲೆ ಡ್ರಗ್ಸ್ ಪ್ರಯೋಗ ಮಾಡಿ ರಿಸಲ್ಟ್ ಗಾಗಿ ನಾನಾ ಕಸರತ್ತು ಮಾಡುವ ಕೆಲ ಫಾರ್ಮಸಿಗಳ ಕುತಂತ್ರದ ಕೆಲಸವನ್ನು ನಿರ್ದೇಶಕ ರಾಜೇಶ್ ಆನಂದಲೀಲಾ ತೋರಿಸಿದ್ದಾರೆ. ಮನೋರಂಜನೆಯ ಅಂಶಗಳು ಕಮ್ಮಿ ಇದ್ದರೂ ಚಿತ್ರದಲ್ಲಿ ಜಾಗೃತಿ ಮೂಡಿಸುವ ಅಂಶ ಗಮನ ಸೆಳೆಯುತ್ತದೆ.
_____
Be the first to comment