ಪೃಥ್ವಿ ಅಂಬರ್ ನಟನೆಯ ‘ದೂರದರ್ಶನ’ ಸಿನಿಮಾ ಮಾರ್ಚ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬಿಡುಗಡೆಯ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಚಿತ್ರತಂಡ ಹೊರಡಿಸಿದೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸುಕೇಶ್ ಶೆಟ್ಟಿ ಅವರೇ ಕಥೆಯನ್ನು ಬರೆದಿದ್ದಾರೆ. ಅವರು ಈ ಹಿಂದೆ ತುಳು ಚಲನಚಿತ್ರಗಳಲ್ಲಿ ಮತ್ತು ಕನ್ನಡ ಚಲನಚಿತ್ರ ಟ್ರಂಕ್ ಸಿನಿಮಾದಲ್ಲಿ ಕೆಲಸ ಮಾಡಿದ್ದರು.
1980ರ ದಶಕದಲ್ಲಿ ದೂರದರ್ಶನ ಮಾಡಿದ್ದ ಮೋಡಿಯ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರ ಹಳ್ಳಿಯಲ್ಲಿ ಟಿವಿ ಬಂದ ನಂತರ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎಂದು ತೋರಿಸಲಿದೆ. ಚಿತ್ರದಲ್ಲಿ ಹಾಸ್ಯ ಇದೆ.
ಇಲ್ಲಿ ಅಯನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಗ್ರಂ ಮಂಜು, ವೀಣಾ ಸುಂದರ್, ಹರಿಣಿ ಶ್ರೀಕಾಂತ್, ಹುಲಿ ಕಾರ್ತಿಕ್, ಸೂರಜ್, ಸೂರ್ಯ ಕುಂದಾಪುರ ಮತ್ತು ದೀಪಕ್ ರೈ ಪಣಾಜೆ ನಟಿಸಿದ್ದಾರೆ.
ರಾಜೇಶ್ ಭಟ್ ಅವರ ವಿಎಸ್ ಮೀಡಿಯಾ ಎಂಟರ್ಪ್ರೈಸಸ್ ನಿರ್ಮಿಸಿರುವ ದೂರದರ್ಶನ ಚಿತ್ರಕ್ಕೆ ಅರುಣ್ ಸುರೇಶ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ, ಪ್ರದೀಪ್ ರಾವ್ ಸಂಕಲನವಿದೆ.
___

Be the first to comment