ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಟ ಡಾಲಿ ಧನಂಜಯ ತಾವು ಮದುವೆಯಾಗುತ್ತಿರುವ ಹುಡುಗಿ ಯಾರೆಂದು ಸೋಷಿಯಲ್ ಮೀಡಿಯಾದಲ್ಲಿ ಪರಿಚಯಿಸಿದ್ದಾರೆ.
ಡಾಲಿ ಧನಂಜಯ ತಾವು ಮದುವೆಯಾಗಲಿರುವ ಧನ್ಯಾತಾ ಜೊತೆಗೆ ಫೋಟೋ ಶೂಟ್ ನಡೆಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೈಸೂರು ಮೂಲದ ವೈದ್ಯೆ ಧನ್ಯಾತಾ ಅವರನ್ನು ಧನಂಜಯ ಮದುವೆಯಾಗಲಿದ್ದಾರೆ. ಇಬ್ಬರೂ ಬಹುಕಾಲದಿಂದ ಆಪ್ತರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.
ಮೈಸೂರಿನಲ್ಲಿಯೇ ಇಬ್ಬರೂ ವಿವಾಹವಾಗಲಿದ್ದಾರೆ. ಡಾಲಿ ಧನಂಜಯ ಜೊತೆಗೆ ನಟಿ ಅಮೃತಾ ಅಯ್ಯಂಗಾರ್ ಹೆಸರು ಥಳುಕು ಹಾಕಿಕೊಂಡಿದ್ದು, ಇಬ್ಬರೂ ತಮ್ಮ ನಡುವೆ ಇರುವುದು ಸ್ನೇಹ ಎಂದು ಸ್ಪಷ್ಟನೆ ನೀಡಿದ್ದರು. ತಮ್ಮ ರಿಯಲ್ ಲೈಫ್ ಜೋಡಿಯನ್ನು ಪರಿಚಯಿಸಿರುವ ಧನಂಜಯ ಎಲ್ಲಾ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ.
ಡಾಲಿ ಧನಂಜಯ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಮದುವೆ ವಿಚಾರ ಹೇಳಿಕೊಂಡಿದ್ದರು. ಆದಷ್ಟು ಬೇಗ ಮದುವೆ ಆಗ್ತೀನಿ ಅಂತ ಹೇಳಿದ್ದರು. ಧನಂಜಯ ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಅವರು ಎಲ್ಲೇ ಹೋದರೂ ನಿಮ್ಮ ಮದುವೆ ಯಾವಾಗ ಎಂದು ಜನ ಕೇಳುತ್ತಲೇ ಇದ್ದರು. ಇದೀಗ ಡಾಲಿ ತಮ್ಮ ಪ್ರೀತಿಯ ಹುಡುಗಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಕನ್ನಡ ರಾಜ್ಯೋತ್ಸವ ದಿನ ಪರಿಚಯಿಸಿದ್ದಾರೆ.
Be the first to comment