ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ತಮ್ಮ ತಂದೆಯ ಹೆಸರಿನಲ್ಲಿ ಕಣ್ಣಿನ ಆಸ್ಪತ್ರೆಗೆ 50ಲಕ್ಷ ರೂ. ಹಣವನ್ನು ದೇಣಿಯಾಗಿ ನೀಡಿದ್ದಾರೆ.
ಹುಟ್ಟೂರಾದ ನೀಲಕಂಠಪುರಂ ಎಂಬ ಹಳ್ಳಿಗೆ ಭೇಟಿ ನೀಡಿದ ಪ್ರಶಾಂತ್ ನೀಲ್ ಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಎಲ್ ವಿ ಪ್ರಸಾದ್ ಐ ಹಾಸ್ಟಿಟಲ್ ಗೆ ಸುಮಾರು 50 ಲಕ್ಷ ರೂ. ಹಣವನ್ನು ದೇಣಿಯಾಗಿ ನೀಡಿದ್ದಾರೆ. ಈ ಬಗ್ಗೆ ಪ್ರಶಾಂತ್ ನೀಲ್ ಸಂಬಂಧಿ ಡಾ.ಎನ್ ರಘುವೀರ ರೆಡ್ಡಿ ಮಾಹಿತಿ ನೀಡಿದ್ದಾರೆ.
ಪ್ರಶಾಂತ್ ನೀಲ್ ತಂದೆ ಶುಭಾಷ್ ಹುಟ್ಟಿದ್ದು ಆಗಸ್ಟ್ 15, 1947ರಂದು. ಅಂದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಈ ಕಾರಣಕ್ಕೆ ಪ್ರಶಾಂತ್ ನೀಲ್ ಅಸ್ಪತ್ರೆಗೆ ಹಣ ದೇಣಿಗೆ ನೀಡಿದ್ದಾರೆ.
ಇದೇ ಮೊದಲ ಭಾರಿಗೆ ಪ್ರಶಾಂತ್ ತೆಲುಗು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನ ಸಲಾರ್ ಸಿನಿಮಾದ ಬಿಡುಗಡೆ ಕುರಿತು ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಅಧಿಕೃತ ಮಾಹಿತಿ ನೀಡಿದೆ.
ಹೊಂಬಾಳೆ ಫಿಲಂಸ್ ನಲ್ಲಿ ವಿಜಯಕುಮಾರ್ ಕಿರಗಂದೂರು ನಿರ್ಮಿಸಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಚಿತ್ರವು 2023ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. 400 ಕೋಟಿ ರೂ.ಗಳಿಗೂ ಮೀರಿದ ದುಬಾರಿ ವೆಚ್ಚ ಮತ್ತು ಅತೀ ನಿರೀಕ್ಷೆಯ ಈ ಚಿತ್ರವು ಈಗಾಗಲೇ ತನ್ನ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ.
ಪ್ರಶಾಂತ್ ನೀಲ್ ಸಮಾಜಮುಖಿ ಕಾರ್ಯಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.
___
Be the first to comment