ಡಾನ್ ಜಯರಾಜ್ ಪಾತ್ರ ಮಾಡಲಿದ್ದಾರೆ ‘ಡಾಲಿ’ ಧನಂಜಯ!

ಪಾಪ್ ಕಾರ್ನ್ ಮಂಕಿ ಟೈಗರ್ (ಪಿಎಂಟಿ) ಚಿತ್ರ ಬಿಡುಗಡೆಗೂ ಮುನ್ನವೇ ಡಾಲಿ ಧನಂಜಯ್ ಅವರ ನಟಿಸಲಿರುವ ಪ್ಯಾನ್ ಇಂಡಿಯಾ ಸಿನಿಮಾವೊಂದು ಘೋಷಣೆಯಾಗಿದೆ.
ಸೋಮವಾರ ಕೆಸಿಎನಲ್ಲಿ ನಡೆದ ಪ್ರತಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರು, ಡಾಲಿ ಧನಂಜಯ್ ಅವರ ಚಿತ್ರವನ್ನು ಘೋಷನೆ ಮಾಡಿದ್ದು, ಪಾಪ್ಕಾರ್ನ್ ಮಂಕಿ ಟೈಗರ್

ಚಿತ್ರದ ಬೆನ್ನಲ್ಲೆ ಮತ್ತೊಂದು ಹೈವೋಲ್ಟೆಜ್ ಸಿನಿಮಾದಲ್ಲಿ ನಟಿಸಲು ಧನಂಜಯ್ ಅವರು ಸಜ್ಜಾಗಿದ್ದು, ಹೆಸರಿಡ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಆಗಿದ್ದಾರೆ.
ಸದ್ಯಕ್ಕೆ ಒಂದು ಕಾಲದಲ್ಲಿ ಬೆಂಗಳೂರಿನ ಭೂಗತ ದೊರೆಯಾಗಿದ್ದ ಜಯರಾಜ್ ಅವರ ಜೀವನಾಧರಿತ ಸಿನಿಮಾದಲ್ಲಿ ನಟಿಸಲು ಧನಂಜಯ್ ಅವರು ಒಪ್ಪಿಕೊಂಡಿದ್ದು, ಈ ಚಿತ್ರದಿಂದ ಅವರ ವೃತ್ತಿ ಬದುಕಿನಲ್ಲೇ ದೊಡ್ಡ ಮಟ್ಟದ ಸಂಭಾವನೆಯನ್ನು ಪಡೆಯಲಿದ್ದಾರೆ.

ಇನ್ನು ಅಲ್ಲಮಪ್ರಭು ಚಿತ್ರದ ನಂತರ ಮತ್ತೊಂದು ಬಯೋಪಿಕ್ನಲ್ಲಿ ಸಿನಿಮಾ ಡಾಲಿ ಧನಂಜಯ್ ಅವರು ಅಭಿಯಸುತ್ತಿದ್ದು, ಎರಡು ಅಧ್ಯಾಯದಲ್ಲಿ ಜಯರಾಜ್ ಅವರ ಜೀವನಧಾರಿತ ಚಿತ್ರ ಶೂಟ್ ಮಾಡಲು ತಂಡ ನಿರ್ಧಾರ ಮಾಡಿದೆ.

ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದ್ದು, ಪಂಚಭಾಷೆಯಲ್ಲಿ ಜಯರಾಜ್ ಜೀವನಾಧರಿತ ಚಿತ್ರ ಸಿದ್ಧವಾಗಲಿದ್ದು, ಅಗ್ನಿ ಶ್ರೀಧರ್ ಅವರ ಕಥೆ, ಅಶುಬೇದ್ರ ಅವರ ನಿರ್ಮಾಣ, ಹೊಸ ಪ್ರತಿಭೆ ಶೂನ್ಯ ಅವರ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!