ಕೊರೊನಾ ಸಂದರ್ಭದಲ್ಲಿ’ಎಂತದ್ದು ಇಲ್ಲಾ ಸರ್ ಬಿಸಿ ರಾಗಿ ಹಿಟ್ಟು, ಡೋಲೋ 650 ಮಾತ್ರೆ’ ಎಂಬ ಡೈಲಾಗ್ ಮೂಲಕ ಸುದ್ದಿಯಾದ ಮೈಸೂರಿನ ಶಶಿರೇಖಾ ಈಗ ಸಿನಿಮಾದಲ್ಲಿ ಹಿರೋಯಿನ್ ಆಗಿ ನಟಿಸಲಿದ್ದಾರೆ!
ಚಿತ್ರಕ್ಕೆ ʻಸೌಜನ್ಯʼ ಎಂದು ಶೀರ್ಷಿಕೆ ಇಡಲಾಗಿದೆ. ʻಇದು ಆರಂಭವಲ್ಲ ಅಂತ್ಯʼ ಎಂಬ ಅಡಿಬರವೂ ಸಿನಿಮಾಕ್ಕಿದೆ. ಮೈಸೂರಿನ ಪ್ರೆಸ್ ಕ್ಲಬ್ನಲ್ಲಿ ಈ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.
ಹೆಚ್.ಡಿ ಕೋಟೆ ಮೂಲದ ಚೇತನ್ ದೇವರಾಜ್ ʻಸೌಜನ್ಯʼ ಹೆಸರಿನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ದೋಸ್ತಿ ಕ್ರಿಯೇಷನ್ಸ್ ಮೂಲಕ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂತ್ರಸ್ತೆ ಸೌಜನ್ಯಾಳ ದುರಂತ ಸಾವಿನ ಕಥೆ ಈ ಸಿನಿಮಾದಲ್ಲಿರಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.
“ಎಂಥದ್ದು ಇಲ್ಲ ಡೋಲೋ 650 ಮಾತ್ರೆ, ಬಿಸಿ ರಾಗಿ ಹಿಟ್ಟು.. ಕರೊನಾದವರಿಗೆ ಅದೇ. ಹೇಳ್ಬಿಟ್ಟು ಬರ್ತದಾ ಸಾರ್.. ಹೋದ ವರ್ಸ್ ಎಲ್ಲ ಆಂಟಿಯರಿಗೆ ಬಂತು.. ಈ ವರ್ಸ್ ಹೈಕ್ಳಿಗೆ, ಹುಡುಗ್ರಿಗೆ ಬಂತು, ಆಮೇಲೆ ಹೊಟ್ಟೆಯೊಳಗಿರೋ ಕೂಸಿಗೆ ಬರುತ್ತೆ.. ತಮ್ಮ ಡೈಲಾಗ್ ಮೂಲಕ ಶಶಿರೇಖಾ ಅವರು ಸಖತ್ ಸುದ್ದಿಯಾಗಿದ್ದರು.
ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುವ ಶಶಿರೇಖಾ ವಿಭಿನ್ನವಾದ ವಿಡಿಯೋಗಳ ಮೂಲಕ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1ಲಕ್ಷದ 75ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
Be the first to comment