DOLLU MOVIE REVIEW : ಕಲೆಯ ಅನಾವರಣ ಈ ಡೊಳ್ಳು

ಚಿತ್ರ : ಡೊಳ್ಳು

ನಿರ್ದೇಶಕ : ಸಾಗರ್ ಪುರಾಣಿಕ್
ನಿರ್ಮಾಪಕರು : ಪವನ್ ಒಡೆಯರ್, ಅಪೇಕ್ಷಾ
ತಾರಾಗಣ : ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಬಾಬು ಹಿರಣ್ಣಯ್ಯ, ಚಂದ್ರಮಯೂರ್, ಶರಣ್ಯ ಸುರೇಶ್ ಹಾಗೂ ಮುಂತಾದವರು.
ರೇಟಿಂಗ್ : 4/5

ನಶಿಸಿ ಹೋಗುತ್ತಿರುವ ಡೊಳ್ಳು ಕಲೆಯ ಬಗ್ಗೆ ಮನಮುಟ್ಟುವಂತೆ ಹಲವು ವಿಚಾರಗಳನ್ನು ತೆರೆಮೇಲೆ ತರುವ ಪ್ರಯತ್ನವೇ ಡೊಳ್ಳು ಚಿತ್ರದ ಕಥಾ ಹಂದರ. ಈ ಪ್ರಯತ್ನವನ್ನು ಚಿತ್ರತಂಡ ಶ್ರದ್ಧೆಯಿಂದ ಮಾಡಿದೆ.

ದೇವಸ್ಥಾನದಲ್ಲಿ ಹಬ್ಬ ಹರಿದಿನಗಳಲ್ಲಿ ಡೊಳ್ಳು ಬಾರಿಸುತ್ತಾ ಸಂಪ್ರದಾಯವನ್ನ ಮುನ್ನಡೆಸಿಕೊಂಡು ಹೋಗುವ ಕಾಳ ತನ್ನ ಮಗ ಭದ್ರ ಸೇರಿದಂತೆ ಒಂದಷ್ಟು ಮಕ್ಕಳಿಗೆ ತರಬೇತಿಯನ್ನು ನೀಡುತ್ತಾನೆ. ಡೊಳ್ಳು ಕಲೆಯಿಂದ ಬದುಕು ಕಟ್ಟಿಕೊಳ್ಳುವ ನಾಯಕ ಭದ್ರನ ಕನಸಿಗೆ ಗೆಳೆಯನ ಸಾವು ಗೊಂದಲಕ್ಕೆ ತಳ್ಳುತ್ತದೆ. ಇದರ ನಡುವೆ ನಾಯಕ ನಾಯಕಿಯ ಪ್ರೇಮಾಂಕುರದ ಕಥೆಯೂ ಸಾಗುತ್ತದೆ.

ಹಣದ ಅವಶ್ಯಕತೆ , ಹೊಸ ಜೀವನ ಕಾಣಲು ಬೆಂಗಳೂರು ಸೇರುವ ಗೆಳೆಯರು. ಇದರಿಂದ ಹಳ್ಳಿಯಲ್ಲಿ ಡೊಳ್ಳೆ ಬದುಕು ಎನ್ನವ ನಾಯಕನ ಸ್ಥಿತಿ ಅತಂತ್ರವಾಗುತ್ತದೆ. ಮುಂದೆ ಈ ಕಥೆ ಹಲವು
ತಿರುವುಗಳೊಂದಿಗೆ ಸಾಗುತ್ತದೆ. ಇದನ್ನು ಡೊಳ್ಳು ನೋಡಿಯೇ ತಿಳಿದುಕೊಳ್ಳಬೇಕು.

ಸರಳವಾಗಿ ಹಲವು ವಿಚಾರಗಳನ್ನು ಪ್ರೇಕ್ಷಕರ ಮುಂದೆ ತರುವುದರಲ್ಲಿ ಯುವ ನಿರ್ದೇಶಕ ಸಾಗರ್ ಪುರಾಣಿಕ್ ಗೆದ್ದಿದ್ದಾರೆ. ಕಲೆಯ ಉಳಿಸುವ ಜೊತೆಗೆ ಬದುಕಿನ ಮೌಲ್ಯ, ಸಂಬಂಧಗಳ ಬೆಸುಗೆ ಬಗ್ಗೆ ಹೇಳಿದ್ದಾರೆ.

ಪವನ್ ಒಡೆಯರ್ ಹಾಗೂ ಪತ್ನಿ ಅಪೇಕ್ಷಾ ಕಲೆಯನ್ನು ಉಳಿಸುವ ಬಗ್ಗೆ ಚಿತ್ರ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಛಾಯಾಗ್ರಾಹಕ ಅಭಿಲಾಶ್ ಕಲಥಿ ತಮ್ಮ ಕೆಲಸದ ಮೂಲಕ ಗಮನ ಸೆಳೆಯುತ್ತಾರೆ. ಡೊಳ್ಳು ಕಲೆಯನ್ನು ಚಿತ್ರದುದ್ದಕ್ಕೂ ಅಚ್ಚುಕಟ್ಟಾಗಿ ಕಟ್ಟಿಕೊಡುವುದರಲ್ಲಿ ಸಂಗೀತ ನಿರ್ದೇಶಕ ಅನಂತ್ ಕಾಮತ್ ಗೆದ್ದಿದ್ದಾರೆ.

ಕಾರ್ತಿಕ್ ಮಹೇಶ್ ನೈಜವಾಗಿ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ನಾಯಕಿ ನಿಧಿ ಹೆಗಡೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎಲ್ಲಾ ಕಲಾವಿದರು ಉತ್ತಮವಾಗಿ ಅಭಿನಯಿಸುವ ಮೂಲಕ ಚಿತ್ರ ಉತ್ತಮವಾಗಿ ಬರಲು ಕಾರಣರಾಗಿದ್ದಾರೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!