ಶಿವರಾಜ್ ಕೆ.ಆರ್ ಪೇಟೆ ನಟನೆಯ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಹೈಲೈಟ್ ಆಗಿದ್ದ ನಾಯಿ ಸಿಂಬು ನಿಧನ ಹೊಂದಿದೆ.
ದಕ್ಷಿಣದ ಯಾವುದೇ ಸಿನಿಮಾದಲ್ಲಿ ನಾಯಿ ಕಾಣಿಸಿಕೊಳ್ಳಬೇಕು ಎಂದರೆ ಸಿಂಬು ಇರಲೇಬೇಕಿತ್ತು. ಅಷ್ಟರ ಮಟ್ಟಿಗೆ ಸಿಂಬು ಫೇಮಸ್ ಆಗಿತ್ತು. ‘ನಾನು ಮತ್ತು ಗುಂಡ’ ಸಿನಿಮಾ ಈ ನಾಯಿಗೆ ಇನ್ನಷ್ಟು ಬೇಡಿಕೆಯನ್ನು ತಂದಿತ್ತು.
ಸಿಂಬುನನ್ನು ಕಳೆದುಕೊಂಡಿರುವ ವಿಷಯವನ್ನು ನಟ ಶಿವರಾಜ್ ಕೆ.ಆರ್ ಪೇಟೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ನಮ್ಮೊಂದಿಗೆ ಸಿಂಬು ನಟಿಸಿರಲಿಲ್ಲ. ಅದರೊಂದಿಗೆ ನಾವು ನಟಿಸಿದ್ದೆವು. ಅದರೊಂದಿಗಿನ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಸಿಂಬು ಇದೀಗ ಇಲ್ಲ ಎನ್ನುವ ಸುದ್ದಿ ಕೇಳಿ ತುಂಬಾ ನೋವಾಯಿತು” ಎಂದು ಬರೆದುಕೊಂಡಿದ್ದಾರೆ.
ನಾನು ಮತ್ತು ಗುಂಡ ಸಿನಿಮಾದಲ್ಲಿ ಸಿಂಬು ನಟಿಸುವಾಗ ಅದಕ್ಕೆ ಎಂಟು ವರ್ಷ ಆಗಿತ್ತು. ಸಿಂಬು ಲ್ಯಾಬ್ರಡರ್ ತಳಿಯ ನಾಯಿ. ಅದಕ್ಕೆ ಸಿನಿಮಾದಲ್ಲಿ ನಟಿಸಲು ಸ್ವಾಮಿ ಅನ್ನುವವರು ತರಬೇತಿ ಕೊಟ್ಟಿದ್ದಾರೆ. ಹಲವು ಸಿನಿಮಾಗಳಲ್ಲಿ ಸಿಂಬು ಕಾಣಿಸಿಕೊಂಡಿದೆ.
ಅಚ್ಚರಿಯ ಸಂಗತಿ ಅಂದರೆ ನಾನು ಮತ್ತು ಗುಂಡು ಸಿನಿಮಾದಲ್ಲಿ ಈ ನಾಯಿ ಡಬ್ಬಿಂಗ್ ಕೂಡ ಮಾಡಿತ್ತು. ಇದು ಅದಕ್ಕೆ ಸಾಕಷ್ಟು ಖ್ಯಾತಿ ತಂದಿತ್ತು.
___

Be the first to comment