ದಿಯಾ ನಾಯಕನ ನೂತನ‌ ಚಿತ್ರ ‍ For regn

ಇತ್ತೀಚೆಗೆ ಕನ್ನಡ‌‌ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಚಿತ್ರ ದಿಯಾ… ಈ ಚಿತ್ರದಲ್ಲಿ ನಾಯಕನಾಗಿ‌ ನಟಿಸಿದ್ದ ಪೃಥ್ವಿ ಅಂಬರ್ ಅಭಿನಯಿಸುತ್ತಿರುವ For regn ಚಿತ್ರ ಮೇ ತಿಂಗಳಿಂದ ಆರಂಭವಾಗುತ್ತಿದೆ. ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರೊಮ್ಯಾಂಟಿಕ್ ಕಥಾ ಹಂದರವಿರುವ ಈ ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ ಕೂಡ ನಿರ್ದೇಶಕರದೆ… ಐ ಟಿ ಹಿನ್ನೆಲೆಯ ನವೀನ್ ದ್ವಾರಕನಾಥ್ ಅವರಿಗೆ ಸುಮಾರು ೫, ೬ ಕಿರುಚಿತ್ರ ನಿರ್ದೇಶನ ಮಾಡಿರುವ ಅನುಭವವಿದೆ…

ನಿಶ್ಚಲ್ ಫಿಲಂಸ್ ಲಾಂಛನದಡಿಯಲ್ಲಿ ನವೀನ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿವೇಕ್ ಅವರ ಛಾಯಾಗ್ರಹಣ ಹಾಗು ಹರೀಶ್ ಆರ್ ಸಂಗೀತ ನಿರ್ದೇಶನ For regn ಚಿತ್ರಕ್ಕಿದೆ..

Be the first to comment

Leave a Reply

Your email address will not be published. Required fields are marked *

Translate »
error: Content is protected !!