ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ನಟಿ ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್ ಮದುವೆ ಬಗ್ಗೆ ಅಪ್ಡೇಟ್ಸ್ ನೀಡಿದ್ದಾರೆ.
ಇತ್ತೀಚೆಗೆ ಡಾಲಿ ಧನಂಜಯ, ಧನ್ಯತಾ ಅವರ ಮದುವೆಯಲ್ಲಿ ಭಾಗಿಯಾದ ಈ ಜೋಡಿ ಮದುವೆ ಯಾವಾಗ ಎಂದು ಹೇಳಿಕೊಂಡಿದ್ದಾರೆ.
“ನಿಮ್ಮ ಮದುವೆ ಯಾವಾಗ” ಎಂದು ದಿವ್ಯಾ ಹಾಗೂ ಅರವಿಂದ್ ಅವರನ್ನು ಪ್ರಶ್ನೆ ಮಾಡಲಾಯಿತು. ಈ ವೇಳೆ ಅರವಿಂದ್ “ನಿಮಗೆ ಹೇಳದೆ ಮದುವೆ ಆಗೋದಿಲ್ಲ. ಅತಿ ಶೀಘ್ರದಲ್ಲಿ ಮದುವೆ” ಎಂದು ಹೇಳಿದ್ದಾರೆ.
ಕೆಪಿ ಅರವಿಂದ್, ದಿವ್ಯಾ ಉರುಡುಗ ಅವರು ಯಾವಾಗ ಮದುವೆ ಆಗ್ತಾರೆ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಿರುತ್ತದೆ. ಆದರೆ ಈ ಜೋಡಿ ಮದುವೆ ಬಗ್ಗೆ ಇದುವರೆಗೂ ಬಾಯಿ ಬಿಟ್ಟಿರಲಿಲ್ಲ.
‘ಬಿಗ್ ಬಾಸ್ʼ ಮನೆಯಲ್ಲಿದ್ದಾಗ ಕೆಪಿ ಅರವಿಂದ್, ದಿವ್ಯಾ ಉರುಡುಗ ಪ್ರೀತಿಯಲ್ಲಿ ಬಿದ್ದಿದ್ದರು. “ಹೊರಗಡೆ ಹೋದ್ಮೇಲೆ ಒಂದಷ್ಟು ವಿಷಯ ಮಾತಾಡಿಕೊಂಡು ಆಮೇಲೆ ಡಿಸೈಡ್ ಮಾಡ್ತೀನಿ” ಎಂದು ಅರವಿಂದ್ ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಹೇಳಿಕೊಂಡಿದ್ದರು. ಆನಂತರದಲ್ಲಿ ದಿವ್ಯಾ, ಅರವಿಂದ್ ಅವರು ಕಮಿಟ್ ಆಗಿದ್ದರು.

Be the first to comment