ದಿಶಾಗೆ 23 ದಶಲಕ್ಷ ಫಾಲೋವರ್ಸ್

ಬಾಲಿವುಡ್‍ನ ಯಶಸ್ಸಿ ನಟಿ ದಿಶಾ ಪಟಾನಿಗೆ 22.9 ದಶಲಕ್ಷ ಫ್ಯಾನ್‍ಗಳು ಮತ್ತು ಫಾಲೋವರ್‍ಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಸಕ್ರಿಯವಾಗಿರುವ ಈ ಬೆಡಗಿಗೆ ಅಭಿಮಾನಿಗಳೊಂದಿಗೆ ಹೇಗೆ ಟಚ್‍ನಲ್ಲಿರಬೇಕೆಂಬುದು ಗೊತ್ತು.

ಇದೇ ಕಾರಣಕ್ಕಾಗಿ ಅಗಾಗ ತನ್ನ ಗ್ಲಾಮರ್ ಫೋಟೋ ಮತ್ತು ವೀಡಿಯೋಗಳನ್ನು ರೆಗ್ಯುಲರ್ ಆಗಿ ಅಪ್‍ಲೋಡ್ ಮಾಡುತ್ತಾಳೆ. ವರ್ಕ್‍ಔಟ್ ಮಾಡುವ ಮತ್ತು ತನ್ನ ದೇಹಸಿರಿಯನ್ನು ಬಿಗಿಯಾಗಿ ಹಿಡಿದಿಟ್ಟ ಉಡುಪುಗಳ ದೃಶ್ಯಗಳನ್ನು ಸಾಮಾಜಿಕ ಜಲತಾಣಗಳಲ್ಲಿ ಹರಿಬಿಡುತ್ತಾಳೆ.  ಬಾಗಿ-2 ನಟಿ ಇನ್ಸ್ ಸ್ಟಾಗ್ರಾಂನಲ್ಲಿ ಮತ್ತೊಂದು ಲವ್ಲಿ ಫೋಟೋ ಅಪ್‍ಲೋಡ್ ಮಾಡಿದ್ದಾಳೆ.

ಬಿಳಿ ಹೂವಿನ ಚಿತ್ತಾರವಿರುವ ಗುಲಾಬಿ ಬಣ್ಣದ ಡೀಪ್ ನೆಕ್‍ಲೈನ್ ಡ್ರೆಸ್‍ನಲ್ಲಿ ದಿಶಾ ಸೌಂದರ್ಯ ಧಾರಾಳವಾಗಿ ಅನಾವರಣಗೊಂಡಿದೆ. ತನ್ನ ಸಿನಿಮಾಗಳು ಮತ್ತು ಮುಂದಿನ ಪ್ರಾಜೆಕ್ಟ್‍ಗಳ ಬಗ್ಗೆ ಅಗಾಗ ಅಭಿಮಾನಿಗಳು ಮತ್ತು ಹಿಂಬಾಲಕರಿಗೆ ಮಾಹಿತಿ ನೀಡುತ್ತಾಳೆ. ಹೀಗಾಗಿ ದಿಶಾ ಅಭಿಮಾನಿಗಳಿಗೆ ಸುಲಭವಾಗಿ ಸಂಪರ್ಕಕ್ಕೆ ಲಭ್ಯವಿರುವ ತಾರೆ.ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಸೂಪರ್‍ಹಿಟ್ ಭಾರತ್‍ನಲ್ಲಿ ರಾಧಾ ಪಾತ್ರದಲ್ಲಿ ಮಿಂಚಿದ ದಿಶಾ ಕೈಯಲ್ಲಿ ಬಿಗ್ ಪ್ರಾಜೆಕ್ಟ್‍ಗಳಿವೆ. ಅನಿಲ್ ಕಪೂರ್, ಕುನಾ ಕೆಮ್ಮು ಮತ್ತು ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಮಲಾಂಗ್ ಚಿತ್ರದಲ್ಲಿ ದಿಶಾ ಅಭಿನಯಿಸುತ್ತಿದ್ದಾಳೆ.

ಮೋಹಿತ್ ಸೂರಿ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ ಫೆಬ್ರವರಿಯಲ್ಲಿ ತೆರೆ ಕಾಣಲಿದೆ, ದಿಶಾ ಪಟಾನಿ ಹಿರಿಯ ನಟ ಜಕಿ ಶ್ರಾಫ್ ಪುತ್ರ-ಸಿಕ್ಸ್ ಪ್ಯಾಕ್ ನಟ ಟೈಗರ್ ಶ್ರಾಫ್ ಪ್ರಿಯತಮೆ ಎಂಬುದು  ಇವರಿಬ್ಬರೂ ವಿವಾಹ ಬಂಧನಕ್ಕೊಳಗಾದರೂ ಅಚ್ಚರಿ ಇಲ್ಲ.

This Article Has 3 Comments
  1. Pingback: situs judi

  2. Pingback: DevOps Companies

  3. Pingback: Buy Sex Toys Online

Leave a Reply

Your email address will not be published. Required fields are marked *

Translate »
error: Content is protected !!