ಕೆಜಿಎಫ್ 2 ಕಲೆಕ್ಷನ್ ಬಗ್ಗೆ ಚರ್ಚೆ

ಬಹುನಿರೀಕ್ಷಿತ ‘ಕೆಜಿಎಫ್ -2’ ಚಿತ್ರದ ಮೊದಲ ದಿನದ ಗಳಿಕೆ RRR ಚಿತ್ರದ ಗಳಿಕೆಯನ್ನು ಮೀರಬಹುದೇ ಎನ್ನುವ ಬಗ್ಗೆ ಸಿನಿಮಾ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ದೇಶದಾದ್ಯಂತ ಜನ ಬಹುನಿರೀಕ್ಷಿತ ಆಗಿ ಎದುರು ನೋಡುತ್ತಿರುವ ಚಿತ್ರಗಳ ಪೈಕಿ ‘ಕೆಜಿಎಫ್-2′ ಚಿತ್ರಕ್ಕೆ ಮೊದಲನೇ ಸ್ಥಾನ ಸಿಕ್ಕಿದೆ. ನಂತರದ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಪಡೆದುಕೊಂಡಿದೆ. ಆರ್ ಆರ್ ಆರ್ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಇದನ್ನು ಕೆಜಿಎಫ್ 2 ಮೀರಿಸುತ್ತದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಕೆಜಿಎಫ್ 2 ಟ್ರೈಲರ್ ಎಲ್ಲಾ ಭಾಷೆಗಳಲ್ಲಿ ಒಂದು ದಿನದಲ್ಲಿ 109 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ದಾಖಲೆ ಮಾಡಿದೆ. ಕೆಜಿಎಫ್-2’ ಚಿತ್ರಕ್ಕೆ ಅತಿ ಹೆಚ್ಚು ನಿರೀಕ್ಷೆ ಇರುವುದು ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿ, ತಮಿಳಿನಲ್ಲೂ ಟ್ರೈಲರ್ ಉತ್ತಮ ವೀಕ್ಷಣೆ ಪಡೆದಿದೆ.

ಮಾರ್ಚ್ 25ರಂದು ಬಿಡುಗಡೆ ಆದ ಆರ್ ಆರ್ ಆರ್ ಚಿತ್ರದ ಮೊದಲ ದಿನದ ಗಳಿಕೆ 223 ಕೋಟಿ ಆಗಿದೆ! ಇದು ಭಾರತೀಯ ಸಿನಿಮಾ ರಂಗದಲ್ಲಿ ಮೊದಲ ದಿನದ ಅತಿದೊಡ್ಡ ಗಳಿಕೆಯಾಗಿದೆ. ಹಿಂದಿನ ದಾಖಲೆ ‘ಬಾಹುಬಲಿ-2’ ಚಿತ್ರ ಹೊಂದಿತ್ತು. ಅದು ಮೊದಲ ದಿನದಲ್ಲಿ 164 ಕೋಟಿ ಗಳಿಕೆ ಕಂಡಿತ್ತು. RRR ಚಿತ್ರ ಮೊದಲ ಮೂರು ದಿನದಲ್ಲಿ 500 ಕೋಟೆಯನ್ನು ಗಳಿಸುವ ಮೂಲಕ ‘ಬಾಹುಬಲಿ- 2’ ಚಿತ್ರದ ನಂತರ 500 ಕೋಟಿಯನ್ನು ಗಳಿಸಿದೆ. ‘ಕೆಜಿಎಫ್ -2’ ಚಿತ್ರ ಮೊದಲ ದಿನದ ಗಳಿಕೆ RRR ಚಿತ್ರದ ಗಳಿಕೆಯನ್ನು ಮೀರಬಹುದೇ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಕೆಜಿಎಫ್ 2 ಕರ್ನಾಟಕದಲ್ಲಿ ಆರು ಶೋ ಪ್ರದರ್ಶನ ಕಂಡರೂ ಚಿತ್ರದ ಒಟ್ಟು ಗಳಿಕೆ 30ರಿಂದ 35 ಕೋಟಿ ಮಾತ್ರ ಒಂದು ದಿನಕ್ಕೆ ಕಾಣಲು ಸಾಧ್ಯ ಇದೆ. ಕರ್ನಾಟಕದಲ್ಲಿ ಒಟ್ಟು 600 ಚಿತ್ರಮಂದಿರಗಳು ಮಾತ್ರ ಇರುವುದು ಇದಕ್ಕೆ ಕಾರಣವಾಗಿದೆ.

ಕೆಜಿಎಫ್ ಚಿತ್ರದ ಬಗ್ಗೆ ದೊಡ್ಡಮಟ್ಟದಲ್ಲಿ ಕ್ರೇಜ್ ಇದ್ದರೂ, ಮೊದಲ ದಿನದ ಗಳಿಕೆಯಲ್ಲಿ RRR ಚಿತ್ರದ ಗಳಿಕೆಯನ್ನು ದಾಟುವುದು ಅಷ್ಟು ಸುಲಭದ ಮಾತಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!