ಯಶಸ್ವಿಯಾದ ‘ಫಿಲ್ಮ್ ಬಜಾರ್’ 

12 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉದ್ಘಾಟನೆ ಗೊಂಡು ಕಾರ್ಯಾರಂಭಿಸಿದ ‘ಫಿಲಂ ಬಜಾರ್’ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ್ಯ ಟ್ರೇಶಿ ವೆಂಕಟೇಶ್ ತಿಳಿಸಿದರು. ಅವರು ಇದೇ  ವಿಚಾರವಾಗಿ ಹಮ್ಮಿಕೊಳ್ಳಲಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕಸದ ಬುಟ್ಟಿ ಸೇರುವಂತಹ ಸಿನಿಮಾಗಳು ಕೂಡಾ ಫಿಲಂ ಬಜಾರ್ ಮೂಲಕ ಒಂದು ಮೊತ್ತವನ್ನು ಪಡೆಯುವ ಸಾಧ್ಯತೆ ಸೃಷ್ಟಿಯಾಗಿದೆಯೆಂದು ಈ ಸಂದರ್ಭದಲ್ಲಿ ಟೇಶಿ ವೆಂಕಟೇಶ್ ಹೇಳಿದರು. ಹನ್ನೆರಡನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಇನ್ನೂ ರೈವತ್ತರಷ್ಟು ಕನ್ನಡ ಚಿತ್ರಗಳಿಗೆ ಫಿಲಂ ಬಜಾರ್ ಮಾರುಕಟ್ಟೆ ಒದಗಿಸಿತ್ತು. ಪಕ್ಕದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮುಂಬಯಿ ಸೇರಿದಂತೆ ಒಂದಷ್ಟು ವಿದೇಶಿ ಗಳಿಂದಲೂ ಸಿನಿಮಾ ಖರೀದಿಯ ವಿಚಾರದಲ್ಲಿ ಮಾತುಕತೆಗೆ ಅವಕಾಶ  ಉಂಟಾಗಿದೆ. ಸಿನಿಮಾ ವಿವಿಧ ರೀತಿಯ ಹಕ್ಕುಗಳ ಮಾರಾಟದ ಬಗ್ಗೆ ತಿಳಿದುಕೊಳ್ಳುವ  ಸಾಧ್ಯತೆಯನ್ನು ಕೂಡಾ ಇದು ಕನ್ನಡದ ನಿರ್ಮಾಪಕ ನಿರ್ದೇಶಕರುಗಳಿಗೆ ಒದಗಿಸಿಕೊಟ್ಟಿದೆ.
ಮಲಯಾಳಂ ಚಿತ್ರರಂಗದಿಂದ ಕನ್ನಡದ ಹಲವಾರು ಚಿತ್ರಗಳ ಡಬ್ಬಿಂಗ್ ಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿರುವುದು ಫಿಲ್ಮ್ ಬಜಾರ್ ನ ವಿಶೇಷ. ಈ ಹಿಂದೆ ಪುನೀತ್ ರಾಜ್ ಕುಮಾರ್ ಮತ್ತು ಒಂದಿಬ್ಬರು ಕನ್ನಡ ಕಲಾವಿದರ ಚಿತ್ರಗಳಿಗಷ್ಟೇ ಇದ್ದ ಡಬ್ಬಿಂಗ್ ಬೇಡಿಕೆ ಫಿಲ್ಮ್ ಬಜಾರ್ ಮೂಲಕ ಹೆಚ್ಚಾಗಿರುವುದು ಖುಷಿಯ ವಿಚಾರ. ಇನ್ನುಮುಂದೆ ಹೊಸದಾಗಿ ಚಿತ್ರನಿರ್ಮಿಸುವ ನಿರ್ಮಾಪಕರುಗಳಿಗೆ ಮುಂಜಾಗ್ರತಾ ಕ್ರಮದೊಂದಿಗೆ ಚಿತ್ರ ನಿರ್ಮಿಸಬಹುದಾದ ಸಲಹೆಗಳನ್ನು ನೀಡಲಿರುವುದಾಗಿ ಟೇಶಿ ವೆಂಕಟೇಶ್ ಈ ಸಂದರ್ಭದಲ್ಲಿ ತಿಳಿಸಿದರು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಫಿಲ್ಮ್ ಬಜಾರ್ ಮಾರುಕಟ್ಟೆ  ಒದಗಿಸಲಿದೆ. ಇದರಿಂದ ಚಿತ್ರವನ್ನು ಮಾರ್ಕೆಟ್ ಮಾಡಲು ಬೇಕಾದ ಮಿನಿಮಮ್ ಖರ್ಚು ವೆಚ್ಚವನ್ನಷ್ಟೇ ಪರ್ಸಂಟೇಜ್ ರೂಪದಲ್ಲಿ ಬಯಸುತ್ತದೆ.  ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಬಿ.ಆರ್. ಕೇಶವ್ ಸೇರಿದಂತೆ ನಿರ್ದೇಶಕ ಸಂಘದ ಪ್ರಮುಖರು ಉಪಸ್ಥಿತರಿದ್ದರು. ಕನ್ನಡ ಚಿತ್ರರಂಗಕ್ಕೆ ಮಾಧ್ಯಮಗಳ ಮೂಲಕ ನೀಡಿದ ಕೊಡುಗೆಗಾಗಿ ಮಾಧ್ಯಮದ ಮಂದಿಗೆ ಸನ್ಮಾನ ಮಾಡಿ ಸ್ಮರಣಿಕೆ
This Article Has 2 Comments
  1. Pingback: Digital Transformation solutions

  2. Pingback: Buy Sex Toys Online

Leave a Reply

Your email address will not be published. Required fields are marked *

Translate »
error: Content is protected !!