ನಿರ್ದೇಶಕ ಗುರುಪ್ರಸಾದ್‌

ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಗುರುಪ್ರಸಾದ್‌ (52) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾದನಾಯಕನಹಳ್ಳಿ ಅಪಾರ್ಟ್‌ ಮೆಂಟ್‌ನಲ್ಲಿ ಫ್ಯಾನಿಗೆ ನೇಣುಬಿಗಿದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಯಾವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಬರಬೇಕಿದೆ. ಅವರ ಅಪಾರ್ಟ್‌ ಮೆಂಟ್‌ ನಿಂದ ಕೊಳತೆ ವಾಸನೆ ಬಂದ ಕಾರಣ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾಲಗಾರರ ಕಿರುಕುಳದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಜಗ್ಗೇಶ್ ಮುಖ್ಯ ಭೂಮಿಗೆಯಲ್ಲಿದ್ದ ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಚಿತ್ರಗಳು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಸದ್ಯ ‘ಅಡೆಮಾ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.

‘ಮಠʼ, ‘ಎದ್ದೇಳು ಮಂಜುನಾಥʼ, ‘ಡೈರೆಕ್ಟರ್‌ ಸ್ಪೆಷೆಲ್‌ʼ ‘ಎರಡನೇ ಸಲʼ, ‘ರಂಗನಾಯಕʼ ಸೇರಿದಂತೆ ಹಲವು ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಇತ್ತೀಚೆಗೆ ಗುರುಪ್ರಸಾದ್ ವಿರುದ್ಧ ಪುಸ್ತಕ ಮತ್ತು ಸಿಡಿಗಳನ್ನು ಖರೀದಿಸಿ ಹಣ ನೀಡದಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಜಯನಗರದ ಟೋಟಲ್ ಕನ್ನಡ ಮಳಿಗೆ ಮಾಲೀಕ ಲಕ್ಷ್ಮೀಕಾಂತ್ ಅವರು ಗುರುಪ್ರಸಾದ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪುಸ್ತಕ ಮತ್ತು ಸಿಡಿಗಳ 65 ಸಾವಿರ ನೀಡದೆ ಸತಾಯಿಸುತ್ತಿದ್ದಾರೆ. ಕರೆ ಮಾಡಿದರೂ ರಿಸೀವ್‌ ಮಾಡುತ್ತಿಲ್ಲ. ಮನೆಯ ವಿಳಾಸ ಕೂಡ ಬದಲಾಯಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!