ಕಾಲೇಜು ವಿದ್ಯಾರ್ಥಿಗಳ ಮೋಜು ಮಸ್ತಿ, ಅಪರಾಧ ಪ್ರಕರಣದಲ್ಲಿ ಸಿಕ್ಕಿಕೊಂಡಾಗ ಪಡುವ ಸಂಕಷ್ಟಗಳು ಇವೆಲ್ಲವುಗಳ ಮಿಶ್ರಣ ಈ ವಾರ ತೆರೆಗೆ ಬಂದಿರುವ ‘ ಬ್ಯಾಕ್ ಬೆಂಚರ್ಸ್ ‘ ಸಿನಿಮಾ.
ತಮಗೆ ಬೇಕಾದಂತೆ ಮೋಜು ಮಸ್ತಿಯಲ್ಲಿ ನಿರತ ಆಗಿರುವ ಹುಡುಗ, ಹುಡುಗಿಯರ ಗುಂಪು ರೇಪ್ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಗೆ ಸಿಕ್ಕಿಕೊಂಡಾಗ ವಿದ್ಯಾರ್ಥಿಗಳ ಭವಿಷ್ಯ ಏನಾಗುತ್ತದೆ? ಈ ರೇಪಿಸ್ಟ್ ಗಳು ಯಾರು ಎನ್ನುವ ಕುತೂಹಲಕ್ಕೆ ಚಿತ್ರ ನೋಡಬೇಕಿದೆ.
ನಿರ್ದೇಶಕರು ಚಿತ್ರದಲ್ಲಿ ಕಾಲೇಜ್ ಕಂಟೆಂಟ್ ಕಥೆಯನ್ನು ತೆಗೆದುಕೊಂಡು ಇಂದಿನ ವಿದ್ಯಾರ್ಥಿಗಳ ತುಂಟಾಟದ ಜೊತೆಗೆ ಅತಿರೇಕದ ವರ್ತನೆಯಿಂದ ಯಾವ ರೀತಿ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ತೆರೆಯ ಮೇಲೆ ಹೇಳುವ ಯತ್ನವನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ವರ್ತನೆ, ಪೋಷಕರು, ಶಿಕ್ಷಣ ವ್ಯವಸ್ಥೆ ಇವೆಲ್ಲದರ ಬಗ್ಗೆ ಬೆಳಕು ಚೆಲುವ ಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ.
ರಂಜನ್ ತಮ್ಮ ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ಜತಿನ್ ಆರ್ಯನ್ ಡೈಲಾಗ್ ಡೆಲಿವರಿ ಖುಷಿ ನೀಡುತ್ತದೆ. ಆಕಾಶ್, ಮಾನ್ಯ ಗೌಡ, ಅನುಷಾ ಸುರೇಶ್, ನಮಿತಾ ಗೌಡ, ವಿಜಯಪ್ರಸಾದ್ ಅವರ ನಟನೆ ಚಿತ್ರಕ್ಕೆ ಪೂರಕವಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅರವಿಂದ್ ಕುಪ್ಲಿಕರ್ ಮಿಂಚಿದ್ದಾರೆ. ಸುಚೇಂದ್ರ ಪ್ರಸಾದ್ ತಮ್ಮ ಪಾತ್ರದಲ್ಲಿ ಸೂಪರ್ ಅನಿಸಿದ್ದಾರೆ.
ಚಿತ್ರದ ಛಾಯಾಗ್ರಹಣ ಅದ್ಭುತವಾಗಿದೆ. ಹಾಡುಗಳು ನೋಡುಗರ ಗಮನ ಸೆಳೆಯುತ್ತವೆ. ಮನರಂಜನೆಯ ದೃಷ್ಟಿಯಿಂದ ಈ ಚಿತ್ರ ಓಕೆ ಅನಿಸುತ್ತದೆ.
___
Be the first to comment