ಫೆಬ್ರವರಿ ತಿಂಗಳಲ್ಲಿ ‘ಡಿಂಗ’ಚಿತ್ರ ತೆರೆಗೆ

ಶ್ರೀಮಾಯಕಾರ ಪ್ರೋಡಕ್ಷನ್ ಲಾಂಛನದಲ್ಲಿ ಡಾ||ಮುಗೂರು ಮಧು ದೀಕ್ಷಿತ್ ಅವರು ನಿರ್ಮಿಸಿರುವ ‘ಡಿಂಗ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ¥sóÉಬ್ರವರಿ ಮೊದಲವಾರದಲ್ಲಿ ಬಿಡುಗಡೆಯಾಗಲಿದೆ. ಜನವರಿ 4ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ.

ಅಭಿಷೇಕ್ ಜೈನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪೂರ್ತಿ ಚಿತ್ರೀಕರಣವನ್ನು ಐಫೋನ್ನ್‍ನಲ್ಲಿ ಸೆರೆ ಹಿಡಿಯಲಾಗಿದೆ. ಐಫೋನ್ ನ್‍ಗೆ ಹೊಂದುವಂತಹ ವಿಶೇಷ ಲೆನ್ಸ್‍ಗಳನ್ನು ಯು.ಎಸ್ ನಿಂದ ತರಿಸಿ ಚಿತ್ರೀಕರಣ ಮಾಡಲಾಗಿದೆ. ಇದು ಇಡೀ ಏಷ್ಯಾದಲ್ಲೇ ಪ್ರಥಮ ಪ್ರಯತ್ನ ಎನ್ನುತ್ತಾರೆ ನಿರ್ದೇಶಕರು. ಒಂದು ಕಮರ್ಷಿಯಲ್ ಚಿತ್ರ ಯಾವ ರೀತಿ ಬರುತ್ತದೊ, ಅದೇ ರೀತಿ ಮೂಡಿಬಂದಿದೆ `ಡಿಂಗ`.

ಸುದ್ದೊ ರಾಯ್ ಸಂಗೀತ ನಿರ್ದೇಶನ, ಮಂಜುನಾಥ್ ಛಾಯಾಗ್ರಹಣ ಹಾಗೂ ಶ್ರೀಕಾಂತ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದಾರೆ. ಆರವ್ ಗೌಡ, ಅಭಿಷೇಕ್ ಜೈನ್, ಅನೂಶ, ನಾಗೇಂದ್ರ ಶಾ, ರಘು ರಮಣಕೊಪ್ಪ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!