ದರ್ಶನ್​ಗೆ ದಿನಕರ್ ಆ್ಯಕ್ಷನ್ ಕಟ್

ದರ್ಶನ್​ಗೆ ನಾನು ಸಿನಿಮಾ ಮಾಡೋದು ಖಚಿತ ಎಂದು  ದಿನಕರ್ ತೂಗುದೀಪ  ಮಾಹಿತಿ ನೀಡಿದ್ದಾರೆ.

‘ರಾಯಲ್’ ಚಿತ್ರದ ಸುದ್ದಿಗೋಷ್ಠಿ  ವೇಳೆ   ಮಾತನಾಡಿದ ದಿನಕರ್ ತೂಗುದೀಪ ಅವರು, ‘ಅಣ್ಣ ತಮ್ಮ ಬೇರೆ ಆಗಿದ್ದೀವಿ ಎಂದು ಯಾರು ಹೇಳಿದ್ದಾರೆ? ಗಂಡ ಹೆಂಡತಿ ಮಧ್ಯೆ ಹೇಗೆ ಜಗಳವೋ ಹಾಗೆ ಅಣ್ಣ ತಮ್ಮ ಎಂದಮೇಲೆ ಜಗಳ ಇದ್ದೇ ಇರುತ್ತದೆ. ನಿರ್ಮಾಪಕರ ಲಿಸ್ಟ್ ದರ್ಶನ್ ಕಡೆಗಿದೆ. ಅವರಿಗೆ ಸಿನಿಮಾ ಮಾಡಬೇಕು ಅಂದಾಗ ಕಥೆ ಕೇಳೋಲ್ಲ. ದರ್ಶನ್ ನನಗಿಂತ ಇಂಡಸ್ಟ್ರಿಯಲ್ಲಿ ಸೀನಿಯರ್’ ಎಂದಿದ್ದಾರೆ.

‘ನಾವು ಮಾತನಾಡುತ್ತಲೇ ಇರುತ್ತೇವೆ. ತಿಂಗಳಿಗೊಮ್ಮೆ  ನಮ್ಮ ಮಧ್ಯೆ ಮಾತುಕತೆ ನಡೆಯುತ್ತಾ ಇರುತ್ತದೆ. ಅತ್ತಿಗೆ ವಿಜಯಲಕ್ಷ್ಮೀ ಜೊತೆ ಯಾವಾಗಲೂ ಕಾಂಟ್ಯಾಕ್ಟ್​ನಲ್ಲಿದ್ದೇನೆ. ಈ ಸಿನಿಮಾಗೆ ದರ್ಶನ್ ಸಾಥ್ ಕೊಡಬಹುದು. ಸದ್ಯ ಅವರಿಗೆ ಬೆನ್ನು ನೋವಿದೆ. ಇದರ ಟ್ರೀಟ್​ಮೆಂಟ್​ಗಾಗಿ ಮೈಸೂರಿಗೆ ಹೋಗಿದ್ದೇವೆ. ಅಜಯ್ ಹೆಗಡೆ ಎರಡು ಬಾರಿ ಟ್ರೀಟ್​ಮೆಂಟ್ ಮಾಡಿದ್ದಾರೆ. ಈ ಕಾರಣಕ್ಕೆ ಅಲ್ಲಿಯೇ ಟ್ರೀಟ್​ಮೆಂಟ್ ನಡೆಯುತ್ತಿದೆ’ ಎಂದು  ಮಾಹಿತಿ ನೀಡಿದ್ದಾರೆ.

ದಿನಕರ್ ತೂಗುದೀಪ ‘ನವಗ್ರಹ’ ಸಿನಿಮಾ ನಿರ್ದೇಶನ ಮಾಡಿ ಭರ್ಜರಿ ಯಶಸ್ಸು ಕಂಡರು. ಈ ಚಿತ್ರದಲ್ಲಿ ದರ್ಶನ್  ನೆಗೆಟಿವ್ ಪಾತ್ರ ಮಾಡಿದ್ದರು.ಬಳಿಕ ದರ್ಶನ್​ ನಟನೆಯ ‘ಸಾರಥಿ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಈ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಸಿನಿಮಾ ಮಾಡೋಕೆ ರೆಡಿ ಆಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!