ಚಿತ್ರ ಈ ವಾರ ಬಿಡುಗಡೆಯಾಗಿದೆ. ಟ್ರೇಲರ್ ಮೂಲಕವೇ ಸಿನಿಮಾ ಭರವಸೆ ಮೂಡಿಸಿತ್ತು. ದಿಗಂತ್ , ಸಂಗೀತಾ ಮುಖ್ಯಭೂಮಿಕೆಯಲ್ಲಿ ಅಭಿನಯದ ಈ ಚಿತ್ರದ ವಿಮರ್ಶೆ :
ಕೃಷ್ಣ (ದಿಗಂತ ಮಂಚಾಲೆ) ಕ್ರಿಮಿನಾಲಜಿ ಓದಿಕೊಂಡಿರುವ ಖತರ್ನಾಕ್ ಕ್ರಿಮಿ. ಪೋಲಿಸ್ ಅಧಿಕಾರಿಗಳು ವಸೂಲಿ ಮಾಡಿ ಡಿಲಿಂಗ್ ಗಳನ್ನು ನಡೆಸಿ ಕೂಡಿಟ್ಟ 60 ಕೋಟಿ ರೂಪಾಯಿ ಮೌಲ್ಯದ 20ಕೆಜಿ ಚಿನ್ನವನ್ನು ಲಪಾಟಾಯಿಸಲು ಪ್ಯಾನ್ ಮಾಡುತ್ತಾನೆ. ಅವನ ಜೊತೆ ಮುದ್ದೆ (ಕಾಕ್ರೋಚ್ ಸುಧಿ) ಗಿಲ್ಕಿ (ಯಶ್ ಶೆಟ್ಟಿ) ಮತ್ತು
ಬಾರೊಂದರಲ್ಲಿ ಡಾನ್ಸರ್ ಆಗಿ ಕೆಲಸ ಮಾಡುವ ಸೋನು (ಸಂಗೀತಾ ಶೃಂಗೇರಿ) ಜೊತೆಯಾಗುತ್ತಾರೆ. ಮೊದಲು ಆ ಚಿನ್ನವನ್ನು ಇನ್ನೊಂದು ಗ್ಯಾಂಗ್ ಆದ ಜಾನಿ (ವಜ್ರಾಂಗ್ ಶೆಟ್ಟಿ) ಮತ್ತು ಗ್ಯಾಂಗ್ ಚಿನ್ನವನ್ನು ದರೋಡೆ ಮಾಡುತ್ತಾರೆ. ಅದನ್ನು ಕಿತ್ತುಕೊಳ್ಳುವ ಕೃಷ್ಣ (ದಿಗಂತ ಮಂಚಾಲೆ) ಅಂಡ ಗ್ಯಾಂಗ್ ಪ್ರಯತ್ನಿಸುತ್ತದೆ ಮುಂದೆನಾಗುತ್ತೆ ಈ ಎರಡೂ ಗ್ಯಾಂಗ್ ಗಳ ಮದ್ಯ ಚಿನ್ನ ಯಾರ ಪಾಲಾಗುತ್ತೆ ಎಂಬುದು ನೀವು ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಬೇಕು.
ದಿಗಂತ್ ಅವರು ಇದುವರೆಗೂ 40 ಸಿನಿಮಾಗಳಲ್ಲಿ ಚಾಕೋಲೇಟ್ ಬಾಯ್ ಆಗೇ ಫೇಮಸ್ ಆದವರು. ಇದೇ ಮೊದಲ ಬಾರಿಗೆ ರಗಡ್ ಪಾತ್ರದಲ್ಲಿ ನಟಿಸಿದ್ದು ಇದೆ ಮೊದಲು. ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್ ಕನ್ನಡ’ ಮೂಲಕ ಜನಪ್ರಿಯ ಪಡೆದವರು ಇವರಿಬ್ಬರೂ ಜೊತೆಯಾಗಿ ನಟಿಸಿರೋ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾರಿಗೋಲ್ಡ್’ ಕನ್ನಡದಲ್ಲಿ ಹಲವು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಬಂದು ಹೋಗಿವೆ. ಅದಕ್ಕಿಂತ ಇದು ಸ್ವಲ್ಪ ಭಿನ್ನವಾಗಿದೆ. ‘ಮಾರಿಗೋಲ್ಡ್’ ಸಿನಿಮಾದ ಮೇಕಿಂಗ್, ನಿರೂಪಣೆ ವಿಚಾರದಲ್ಲಿ ನಿರ್ದೇಶಕರು ಅಚ್ಚುಕಟ್ಟಾಗಿ ಕಟ್ಟಿದ್ದಾರೆ.
ಪಂಚಿಂಗ್ ಡೈಲಾಗ್ ಮೂಲಕ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಅವರು ಪ್ರಬುದ್ಧ ನಟನೆ ತೋರಿದ್ದಾರೆ. ಅವರ ಭಿನ್ನ ಮ್ಯಾನರಿಸಂ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಸಿನಿಮಾ ಉದ್ದಕ್ಕೂ ಅವರು ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಸಂಗೀತಾ ಶೃಂಗೇರಿ ಅವರು ಬಾರ್ನಲ್ಲಿ ಡಾನ್ಸರ್ ಆಗಿ, ಪ್ರೀತಿ ಬಗ್ಗೆ ತನ್ನದೇ ಕಲ್ಪನೆ ಹೊಂದಿ, ಏನೂ ಬೇಕಾದರೂ ಮಾಡುವೆ ಎನ್ನುವ ಹುಡುಗಿಯಾಗಿ ಗಮನ ಸೆಳೆಯುತ್ತಾರೆ.
ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಸಿನಿಮಾದ ಉದ್ದಕ್ಕೂ ಪಂಚಿಂಗ್ ಹಾಗೂ ನಗುವಿನ ಕಚಗುಳಿ ಇಡುವ ಸಂಭಾಷಣೆ ಗಮನ ಸೆಳೆದಿವೆ.
ಕಾಕ್ರೋಚ್ ಸುಧಿ, ಯಶ್ ಶೆಟ್ಟಿ ಪಾತ್ರಕ್ಕೂ ತೂಕ ಇದೆ. ಸಂಪತ್ ಮೈತ್ರಿ ಅವರು ಇಡೀ ಕಥೆಗೆ ಟ್ವಿಸ್ಟ್ ಕೊಡೋ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ನಟನೆಯಲ್ಲಿ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ.
ರಾಘವೇಂದ್ರ ಅವರು ಒಂದು ಒಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
Be the first to comment