”ಸಪ್ತ ಸಾಗರ…”ದಲ್ಲಿ ರಕ್ಷಿತ್ ಶೆಟ್ಟಿ ಭಿನ್ನ ಲುಕ್

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ ‘ ಚಿತ್ರದ ಫಸ್ಟ್​ ಲುಕ್ ಬಿಡುಗಡೆಯಾಗಿದ್ದು, ಲುಕ್ ಮೂಲಕ ರಕ್ಷಿತ್ ಶೆಟ್ಟಿ ಅವರು ಫ್ಯಾನ್ಸ್ ಗಳಿಗೆ ಶಾಕ್ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದು ಭಿನ್ನವಾಗಿ ಕಾಣುತ್ತಿದ್ದಾರೆ. ಚಿತ್ರಕ್ಕಾಗಿ 15 ರಿಂದ 20 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಅರ್ಧ ಭಾಗದ ಚಿತ್ರೀಕರಣಕ್ಕಾಗಿ ರಕ್ಷಿತ್​ ಶೆಟ್ಟಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಅವರು ಇನ್ನುಳಿದ ಭಾಗಕ್ಕೆ ತೂಕ ಹೆಚ್ಚಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ರಕ್ಷಿತ್​ ಶೆಟ್ಟಿ ಅಭಿನಯದ ಯಶಸ್ವಿ ಚಿತ್ರವಾದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೆ ಹೇಮಂತ್ ರಾವ್ ನಿರ್ದೇಶಕರಾಗಿದ್ದರು. ಈಗ ಮತ್ತೆ ರಕ್ಷಿತ್,​ ಹೇಮಂತ್​ ಜೋಡಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಜೊತೆಯಾಗಿದ್ದು, ಮೋಡಿ ಮಾಡಲು ಸಿದ್ಧರಾಗಿದ್ದಾರೆ.

ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರಕ್ಕೆ ಚರಣ್ ರಾಜ್​ ಸಂಗೀತ ನಿರ್ದೇಶಕ. ಅವರ ಇತ್ತೀಚಿನ ಚಿತ್ರಗಳಾದ ಟಗರು, ಪಾಪ್ ಕಾರ್ನ್ ಮಂಕಿ ಟೈಗರ್, ಸಲಗ ಚಿತ್ರದ ಹಾಡುಗಳು ಸೂಪರ್ ಹಿಟ್​ ಆಗಿವೆ. ಪುನೀತ್​ ರಾಜ್​ಕುಮಾರ್ ಅವರ ಜೇಮ್ಸ್ ಚಿತ್ರಕ್ಕೂ ಅವರೇ ಸಂಗೀತ ನೀಡಿದ್ದರು.

ಈ ಚಿತ್ರದ ಕಥೆಯ 2010ರಲ್ಲಿ ನಡೆಯುವ ಪ್ರೀತಿಯ ಕಥೆಯಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು, ಶಿವಮೊಗ್ಗದಲ್ಲೇ ನಡೆದಿದೆ. 777 ಚಾರ್ಲಿ ಚಿತ್ರದ ಬಳಿಕ ಸಿನಿಪ್ರಿಯರು ಈ ಚಿತ್ರಕ್ಕಾಗಿ ಕಾತರದಿಂದ ಕಾಯುವಂತೆ ಫಸ್ಟ್ ಲುಕ್ ಮಾಡಿದೆ.
___

 

Be the first to comment

Leave a Reply

Your email address will not be published. Required fields are marked *

Translate »
error: Content is protected !!