ಬಹುನಿರೀಕ್ಷಿತ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾದ ಅವಧಿ 6 ನಿಮಿಷಗಳಷ್ಟು ಚಿಕ್ಕದಾಗಿದೆ.
ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಿ, 21 ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದೆ. ಚಿತ್ರದ ಪೇಯ್ಡ್ ಪ್ರಿವ್ಯೂಗಳು ಇಂದು ಆರಂಭ ಆಗುತ್ತಿವೆ. ಅದಕ್ಕೂ ಮುನ್ನ ಸೆನ್ಸಾರ್ ಮಂಡಳಿಯ ವರದಿ ಹೊರಬಿದ್ದಿದೆ.
ಚಿತ್ರದಲ್ಲಿ ಅತಿಯಾದ ಹಿಂಸೆಯ ದೃಶ್ಯಗಳು ಇರುವ ಕಾರಣದಿಂದ ಕೇಂದ್ರ ಸೆನ್ಸಾರ್ ಮಂಡಳಿ ಬದಲಾವಣೆಗಳನ್ನು ಸೂಚಿಸಲಾಗಿದೆ. ಇದರಲ್ಲಿ 4 ದೃಶ್ಯಗಳು ಅತ್ಯಂತ ಭಯಾನಕವಾಗಿದ್ದವು ಎಂದು ವರದಿಯಾಗಿದೆ. ಕಣ್ಣುಗಳನ್ನು ಜಜ್ಜುವ ದೃಶ್ಯ, ಕಾಲಿನಿಂದ ಒದೆಯುವ ದೃಶ್ಯ, ಸಿಮೆಂಟ್ ಬ್ಲಾಕ್‌ನಿಂದ ತಲೆಗೆ ಹೊಡೆಯುವ ದೃಶ್ಯ, ಸುತ್ತಿಗೆಯಿಂದ ತಲೆಗೆ ಬಡಿಯುವ ದೃಶ್ಯಗಳ ಅವಧಿಯನ್ನು ಕಡಿತಗೊಳಿಸಲಾಗಿದೆ.
ಹಿಂಸಾಚಾರ ಮಾತ್ರವಲ್ಲದೆ ಕೆಲವು ಮಾಹಿತಿಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನೂ ಸೆನ್ಸಾರ್ ಮಂಡಳಿ ಸೂಚಿಸಿದೆ. ಸೆನ್ಸಾರ್ ಕಟ್ ನಂತರ ಭಾರತದಲ್ಲಿ ಈ ಚಿತ್ರದ ಒಟ್ಟು ಅವಧಿ 3 ಗಂಟೆ 49 ನಿಮಿಷ 36 ಸೆಕೆಂಡ್ ಆಗಿದೆ. ವಿದೇಶಗಳಲ್ಲಿ ಬಿಡುಗಡೆಯಾಗುತ್ತಿರುವ ಅವೃತ್ತಿ ಅವಧಿ 3 ಗಂಟೆ 55 ನಿಮಿಷಗಳಷ್ಟಿದೆ.
ಆದಿತ್ಯ ಧಾರ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಮ್ಪಾಲ್, ಸಾರಾ ಅರ್ಜುನ್, ಆರ್. ಮಾಧವನ್ ಅಭಿನಯ ಇದೆ.
—-





Be the first to comment