ಮಾರ್ಚ್ 7ಕ್ಕೆ ‘ಧುರಂಧರ್ 2’ ಟ್ರೈಲರ್‌

ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾದ ಟ್ರೈಲರ್ ಮಾರ್ಚ್ 7ರಂದು ಬೆಳಿಗ್ಗೆ 11:01ಕ್ಕೆ ಬಿಡುಗಡೆ ಆಗಲಿದೆ.

ಆದಿತ್ಯ ಧರ್ ನಿರ್ದೇಶನ ಮಾಡುತ್ತಿರುವ ‘ಧುರಂಧರ್ 2’ ಸಿನಿಮಾ ಸಿನಿಪ್ರಿಯರಲ್ಲಿ ಈಗಾಗಲೇ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. ಮಾರ್ಚ್ 3ರಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದರೂ ಅಂದು ಟ್ರೈಲರ್ ಬಿಡುಗಡೆ ಆಗಿರಲಿಲ್ಲ. ಇದೀಗ ಚಿತ್ರತಂಡ ಅಧಿಕೃತ ಘೋಷಣೆ ಮಾಡಿ ಮಾರ್ಚ್ 7ರಂದು ಟ್ರೈಲರ್ ಬಿಡುಗಡೆ ಆಗಲಿದೆ ಎಂದು ತಿಳಿಸಿದೆ.

ಟ್ರೈಲರ್ ಬಿಡುಗಡೆ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಣವೀರ್ ಸಿಂಗ್, “Brace Yourself” ಎಂದು ಟ್ವೀಟ್ ಮಾಡಿ  ಕುತೂಹಲ ಹೆಚ್ಚಿಸಿದ್ದಾರೆ.

 ‘ಧುರಂಧರ್ 2’  ಟೀಸರ್‌ನಲ್ಲಿ ರಣವೀರ್ ಸಿಂಗ್ ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಗಮನ ಸೆಳೆದಿದೆ. ಈ ಸಿನಿಮಾ ರಣವೀರ್ ಪಾತ್ರ ಪಾಕಿಸ್ತಾನಕ್ಕೆ ತೆರಳುವ ಮುಂಚಿನ ಕಥೆಯನ್ನು ಒಳಗೊಂಡಿರಬಹುದು ಎಂಬ ಮಾಹಿತಿ ಹರಿದಾಡುತ್ತಿದೆ. ಟ್ರೈಲರ್ ಮೂಲಕ ಸಿನಿಮಾದ ಕಥೆಯ ಕುರಿತ ಹೆಚ್ಚಿನ ಸುಳಿವು ಸಿಗುವ ನಿರೀಕ್ಷೆ ಇದೆ.

ಮೊದಲ ಭಾಗದಲ್ಲಿ ಭಾರತೀಯ ಗೂಢಚಾರಿಯೊಬ್ಬ ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಸಿಂಡಿಕೇಟ್ ಅನ್ನು ನಾಶ ಮಾಡುವ ಕಥೆ ಹೇಳಲಾಗಿತ್ತು.

‘ಧುರಂಧರ್ 2’  ಮಾರ್ಚ್ 19 ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಚಿತ್ರ ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!