ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಚಿತ್ರದ ಟಿಕೆಟ್ ದರ ಬಿಡುಗಡೆ ಮುನ್ನ ಗಗನಕ್ಕೆ ಏರಿದೆ.
ಚಿತ್ರ ಬಿಡುಗಡೆ ಮುನ್ನ ಭಾರೀ ಕ್ರೇಜ್ ಸೃಷ್ಟಿ ಆಗಿದ್ದು, ಮಾರ್ಚ್ 18ರಂದು ಆಯ್ದ ಚಿತ್ರಮಂದಿರಗಳಲ್ಲಿ ಪೇಯ್ಡ್ ಪ್ರಿವ್ಯೂಗಳು ಆರಂಭವಾಗಲಿವೆ. ದೇಶದ ವಿವಿಧ ನಗರಗಳಲ್ಲಿ ಟಿಕೆಟ್ಗಳ ದರ ಗಗನಕ್ಕೇರಿದ್ದರೂ ಪ್ರೇಕ್ಷಕರು ಮುಗಿಬಿದ್ದು ಬುಕ್ಕಿಂಗ್ ಮಾಡುತ್ತಿದ್ದಾರೆ ವಿಶೇಷ ಆಗಿದೆ.
ಅಡ್ವಾನ್ಸ್ ಬುಕ್ಕಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ಚಿತ್ರದ ಸುಮಾರು 3 ಲಕ್ಷ ಟಿಕೆಟ್ಗಳು ಮಾರಾಟವಾಗಿ ಬಿಡುಗಡೆಗೂ ಮುನ್ನವೇ ಚಿತ್ರ ಭಾರತದಲ್ಲಿ 15 ಕೋಟಿಗೂ ಅಧಿಕ ಮೊತ್ತವನ್ನು ಗಳಿಸಿದೆ. ಇದು ಬಾಲಿವುಡ್ ಚಿತ್ರವೊಂದರ ಪ್ರೀಮಿಯರ್ ಶೋಗೆ ದೊರೆತಿರುವ ಅತಿ ದೊಡ್ಡ ಮುಂಗಡ ಕಲೆಕ್ಷನ್ಗಳಲ್ಲಿ ಒಂದಾಗಿದೆ.
ಮುಂಬೈನ ಬೊರಿವಲಿಯ ಐನಾಕ್ಸ್ ಮೆಗಾಪ್ಲೆಕ್ಸ್ ನಲ್ಲಿ ರಿಕ್ಲೈನರ್ ಸೀಟುಗಳ ಬೆಲೆ 3,100 ರೂಪಾಯಿವರೆಗೆ ಏರಿಕೆಯಾಗಿದೆ. ದೆಹಲಿಯ ಪಿವಿಆರ್ ಸೆಲೆಕ್ಟ್ ಸಿಟಿ ವಾಕ್ ನಲ್ಲಿ ಟಿಕೆಟ್ ದರ 2,400 ರೂ.ವರೆಗೆ ತಲುಪಿದೆ. ದೇಶದ ಮೆಟ್ರೋ ನಗರಗಳಲ್ಲಿ ಸಾಮಾನ್ಯ ಸೀಟುಗಳ ಬೆಲೆ 600ರಿಂದ 900 ರೂಪಾಯಿ ತಲುಪಿದೆ.
ಐಮ್ಯಾಕ್ಸ್ ಶೋಗಳಿಗೆ ,1 ಸಾವಿರ ರೂ.ಗೂ ಅಧಿಕ ದರ ಇದ್ದರೂ ಬಹುತೇಕ ಶೋಗಳು ಈಗಾಗಲೇ ಹೌಸ್ಫುಲ್ ಆಗಿವೆ. ಹಿಂದಿಯ ಜೊತೆಗೆ ದಕ್ಷಿಣ ಭಾರತದ ಭಾಷೆಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಕನ್ನಡ ಮತ್ತು ತೆಲುಗು ಆವೃತ್ತಿಗಳ ಟಿಕೆಟ್ಗಳು 400 ರೂಪಾಯಿ ಆಸುಪಾಸು ದರದಲ್ಲಿ ಮಾರಾಟವಾಗುತ್ತಿವೆ. ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಹಿಂದಿ ಆವೃತ್ತಿಯ ಟಿಕೆಟ್ಗಳು ಸಾವಿರ ರೂಪಾಯಿಗೂ ಅಧಿಕ ದರದಲ್ಲಿ ಮಾರಾಟವಾಗಿವೆ. ತಮಿಳುನಾಡು ನಲ್ಲಿ ಸರ್ಕಾರ ನಿಗದಿ ಮಾಡಿದ ಮಿತಿ ಕಾರಣ ಟಿಕೆಟ್ ದರ 166 ರೂ.ಗೆ ನಿಗದಿಯಾಗಿದೆ.
ಆದಿತ್ಯ ಧರ್ ನಿರ್ದೇಶನದ ಚಿತ್ರದಲ್ಲಿ ರಣವೀರ್ ಸಿಂಗ್ ಪಾಕಿಸ್ತಾನದಲ್ಲಿರುವ ಭಾರತೀಯ ಗೂಢಚಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್. ಮಾಧವನ್, ಅರ್ಜುನ್ ರಾಮ್ಪಾಲ್, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಮೊದಲ ಭಾಗ ವಿಶ್ವದಾದ್ಯಂತ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಗಳಿಸಿ ದಾಖಲೆ ನಿರ್ಮಿಸಿದೆ. ಎರಡನೇ ಭಾಗ ಅದೇ ಹಾದಿಯಲ್ಲಿ ನಡೆದಂತೆ ಕಾಣುತ್ತಿದೆ.
_





Be the first to comment