2025ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ರಣವೀರ್ ಸಿಂಗ್ ನಟನೆಯ ‘ಧುರಂದರ್’ ಹೊರ ಹೊಮ್ಮಿದೆ.
‘ಕಾಂತಾರ: ಚಾಪ್ಟರ್ 1’ 2025ರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿತ್ತು. ಈ ಚಿತ್ರದ ದಾಖಲೆಯನ್ನು ‘ಧುರಂಧರ್’ ಮುರಿದು ಹಾಕಿದೆ. ‘ಧುರಂಧರ್’ ಚಿತ್ರದ ವಿಶ್ವ ಮಟ್ಟದ ಕಲೆಕ್ಷನ್ 935 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಚಿತ್ರ ಶೀಘ್ರವೇ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಎಲ್ಲಾ ಸಾಧ್ಯತೆ ಇದೆ. ‘ಕಾಂತಾರ: ಚಾಪ್ಟರ್ 1’ ಚಿತ್ರದ ಒಟ್ಟಾರೆ ಕಲೆಕ್ಷನ್ 850 ಕೋಟಿ ರೂ. ಆಗಿತ್ತು.
‘ಧುರಂಧರ್’ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ. ಆದರೂ ಸಿನಿಮಾ ಕಲೆಕ್ಷನ್ ತಗ್ಗಿಲ್ಲ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 600 ಕೋಟಿ ರೂ. ಗಳಿಸಿದೆ. ಈ ವೀಕೆಂಡ್ ಒಳಗೆ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ ಇದೆ.
‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್, ಆದಿತ್ಯ ಧಾರ್ ನಟಿಸಿದ್ದಾರೆ. ಈ ಸಿನಿಮಾ ಸಾಕಷ್ಟು ನೆಗೆಟಿವ್ ಟಾಕ್ ಪಡೆದಿತ್ತು. ಆದರೂ ‘ಧುರಂಧರ್’ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬೀಗಿದೆ.
—–





Be the first to comment