ಬ್ಲಾಕ್ಬಸ್ಟರ್ ಸಿನಿಮಾ ‘ಧುರಂಧರ್’ ಮಾರ್ಚ್ 12 ರಂದು 250 ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಿದೆ.
ರಣವೀರ್ ಸಿಂಗ್ ನಟನೆಯ ‘ಧುರಂಧರ್’ 2025 ರ ಡಿಸೆಂಬರ್ನಲ್ಲಿ ಬಿಡುಗಡೆಗೊಂಡು ಹಿಟ್ ಆಗಿತ್ತು. ‘ಧುರಂಧರ್ 2’ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಈಗ ಎರಡನೇ ಭಾಗ ಮುನ್ನ ಮೊದಲ ಭಾಗ ಬಿಡುಗಡೆ ಆಗಿದೆ.
ಚಿತ್ರ ಅಮೆರಿಕ, ಕೆನಡಾ ಸೇರಿದಂತೆ ವಿದೇಶಗಳಲ್ಲಿ ಮಾರ್ಚ್ 13 ರಿಂದ ಮರು ಬಿಡುಗಡೆ ಆಗುತ್ತಿದೆ. ಉತ್ತರ ಅಮೆರಿಕದಲ್ಲಿ 185 ಸ್ಕ್ರೀನ್ಗಳು, ವಿಶ್ವದಾದ್ಯಂತ ಒಟ್ಟು 500 ಸ್ಕ್ರೀನ್ಗಳಲ್ಲಿ ಚಿತ್ರ ಪ್ರದರ್ಶನ ನಡೆಯುತ್ತಿದೆ.
ಚಿತ್ರದ ರಿ-ರಿಲೀಸ್ ಮೂಲಕ ಪ್ರೇಕ್ಷಕರು ಮೊದಲ ಭಾಗವನ್ನು ಪುನಃ ಸವಿಯುವ ಅವಕಾಶವನ್ನು ಪಡೆದಿದ್ದಾರೆ.
‘ಧುರಂಧರ್ 2’ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಪ್ರೀಮಿಯರ್ ಶೋಗಳು ಮಾರ್ಚ್ 18 ರಿಂದ ಪ್ರಾರಂಭವಾಗಲಿದೆ.ಈಗ ಪ್ರೇಕ್ಷಕರು ಎರಡೂ ಭಾಗಗಳನ್ನು ಚಿತ್ರಮಂದಿರದಲ್ಲಿ ನೋಡಬಹುದಾಗಿದೆ.
_





Be the first to comment