‘ಧುರಂಧರ್ 2’ ಟೀಸರ್‌ಗೆ ಬೇಸರ

ರಣವೀರ್ ಸಿಂಗ್ ನಟನೆಯ ‘ಧುರಂಧರ್2’  ಸಿನಿಮಾದ ಟೀಸರ್ ನೋಡಿದ ಬಹುತೇಕ ಅಭಿಮಾನಿಗಳು ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಕಳೆದ ವರ್ಷ  ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಭಾರಿ ಯಶಸ್ಸು ಕಂಡ ಈ ಚಿತ್ರದ  ಸೀಕ್ವೆಲ್ ಈಗ ಬರಲು ಸಜ್ಜಾಗಿದೆ. ಮೊದಲೇ ಶೂಟಿಂಗ್ ಮುಗಿದಿರುವುದರಿಂದ ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

‘ಧುರಂಧರ್2’  ಟೀಸರ್ ಮೂಲಕ ಚಿತ್ರದ ರಿಲೀಸ್ ದಿನಾಂಕವನ್ನು ಖಚಿತ ಪಡಿಸಲಾಗಿದೆ. ‘ಧುರಂಧರ್’ ಕ್ಲೈಮ್ಯಾಕ್ಸ್‌ನಲ್ಲಿ ಎರಡನೇ ಭಾಗದ ಸುಳಿವು ನೀಡಲಾಗಿತ್ತು. ಆದರೆ ಈಗ ಅದೇ ದೃಶ್ಯಗಳನ್ನು ಟೀಸರ್ ರೂಪದಲ್ಲಿ ಬಿಡುಗಡೆ ಮಾಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

‘ಧುರಂಧರ್ 2’ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ನಿರ್ಮಾಣವಾಗಿತ್ತು. ಆ ನಿರೀಕ್ಷೆಗೆ ತಕ್ಕಂತೆ ಹೊಸ ದೃಶ್ಯಗಳಿರುವ ಟೀಸರ್ ಬೇಕಿತ್ತು.  ಕನ್ನಡ ಟೀಸರ್ ಕೊನೆಯಲ್ಲಿ ಬರುವ “ಇದು ಹೊಸ ಭಾರತ, ಇದು ಮನೆಯೊಳಗೆ ನುಗ್ಗಿ  ಕೊಲ್ಲುತ್ತದೆ” ಎಂಬ ಸಾಲುಗಳು ಕಥೆಗೆ ಸರಿಹೊಂದುತ್ತಿಲ್ಲ ಎಂಬ ಅಭಿಪ್ರಾಯ  ವ್ಯಕ್ತವಾಗಿದೆ.

‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್ ಸ್ಪೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ಪಾಕಿಸ್ತಾನಕ್ಕೆ ತೆರಳಿ ಉಗ್ರಗಾಮಿಗಳ ಜೊತೆ ಬೆರೆತು ಭಾರತದ ಪರ ಕೆಲಸ ಮಾಡುವ ಕಥೆ ಪ್ರೇಕ್ಷಕರಿಗೆ ಹಿಡಿಸಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಎರಡನೇ ಭಾಗದ ಸುಳಿವು ನೀಡಲಾಗಿತ್ತು. ಈಗ ಅದೇ ದೃಶ್ಯಗಳನ್ನು ಟೀಸರ್ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ.

ಟೀಸರ್ ನಿರಾಸೆ ಮೂಡಿಸಿದ ಕಾರಣ ಅದೇ ದಿನ ಬಿಡುಗಡೆಯಾಗುತ್ತಿರುವ ‘ಟಾಕ್ಸಿಕ್’ ಸಿನಿಮಾಗೆ ಲಾಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!