dhumam: ಧೂಮಮ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಪವನ್ ಕುಮಾರ್ ನಿರ್ದೇಶನ, ಫಾಸಿಲ್ ಅಭಿನಯದ ಧೂಮಮ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಚಿತ್ರ ನಿರ್ಮಾಣ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ. ಫಸ್ಟ್ ಲುಕ್ ಪೋಸ್ಟರ್‌ ನಲ್ಲಿ ಫಹದ್ ಫಾಸಿಲ್ ಅವರ ಹಣೆಯ ಮೇಲೆ ಗಾಯದ ಗುರುತಿದೆ. ಅಲ್ಲದೆ ಅವರ ಬಾಯಿಗೆ ಟೇಪ್ ಹಾಕಲಾಗಿದೆ. ಪೋಸ್ಟರ್ ನ ಹಿನ್ನಲೆಯಲ್ಲಿ ಉಳಿದ ಪಾತ್ರವರ್ಗವನ್ನು ಸಹ ನೋಡಬಹುದಾಗಿದೆ.

ಕೆಜಿಎಫ್ ಮತ್ತು ಕಾಂತಾರವನ್ನು ನಿರ್ಮಿಸಿದ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಪ್ಯಾನ್ ಇಂಡಿಯಾ ಚಿತ್ರವಾಗಿರುವ ಧೂಮಮ್ ಚಿತ್ರದಲ್ಲಿ ರೋಷನ್ ಮ್ಯಾಥ್ಯೂ, ಅಪರ್ಣಾ ಬಾಲಮುರಳಿ, ವಿನೀತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ, ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಇದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!