‘ಧ್ರುವತಾರೆ’ ರಿಲೀಸ್ ಗೆ ರೆಡಿ

ಸೋಷಿಯಲ್ ಮೀಡಿಯಾದ  ಫೇಮಸ್ ಕಪಲ್ ಪ್ರತೀಕ್ ಅಂಡ್ ಮೌಲ್ಯ, ತಮ್ಮ ನಿರ್ದೇಶನ ಹಾಗೂ ಅಭಿನಯದ ‘ಧ್ರುವತಾರೆ’ ಸಿನಿಮಾ ರಿಲೀಸ್ ಗೆ ಪ್ಲ್ಯಾನ್ ಮಾಡಿದ್ದಾರೆ.

ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದ್ದು ಮುಂದಿನ ಸೆಪ್ಟೆಂಬರ್ ಹೊತ್ತಿಗೆ ತೆರೆಗೆ ಬರಲು ಸಿದ್ಧವಾಗಿದೆ.

‘ಧ್ರುವತಾರೆ’ ಸಿನಿಮಾವನ್ನು ಪ್ರತೀಕ್ ನಿರ್ದೇಶನ ಮಾಡಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮ ಕಥೆ ಹೊಂದಿರುವ ಸಿನಿಮಾ. ಸಿನಿಮಾವನ್ನು ಜಿ ಪಿ ಫಿಲಂ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಪಿ ಜಿ ಫಿಲಂ ಸ್ಟುಡಿಯೋಸ್ನ ಮೊದಲನೇ ಸಿನಿಮಾ ಇದಾಗಿದೆ.

ಈಗಾಗಲೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. 70 ದಿನಗಳ ಕಾಲ ಸಿನಿಮಾದ  ಚಿತ್ರೀಕರಣವನ್ನು ಬೆಂಗಳೂರು,  ಸಕ್ಲೇಶಪುರ ಸುತ್ತಮುತ್ತ ನಡೆಸಲಾಗಿದೆ.

ಚಿತ್ರಕ್ಕೆ ಸೂರಜ್ ಜೋಯ್ಸ್ ಸಂಗೀತ,  ಜೀಚನ್  ಕ್ಯಾಮರಾ ಹಿಡಿದಿದ್ದಾರೆ.  ಮುಖ್ಯ ತಾರಾಗಣದಲ್ಲಿ ಪ್ರತೀಕ್ ಮತ್ತು ಮೌಲ್ಯ ಕಾಣಿಸಿಕೊಂಡಿದ್ದು ಉಳಿದಂತೆ ರಮೇಶ್ ಭಟ್, ಮೂಗ್ ಸುರೇಶ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿ ಡಿ ಸತೀಶ್, ಸಂಗೀತ ನಾರಾಯಣ್,  ನೆಗೆಟಿವ್ ಶೇಡ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!