ಮುಂದಿನ ವರ್ಷ ಎರಡು ಚಿತ್ರಗಳು ಬಿಡುಗಡೆ ಆಗಲಿವೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಮುಂದಿನ ವರ್ಷ ಕೆಡಿ ಬಿಡುಗಡೆಯಾಗಲಿದೆ. ಅಂತೆಯೇ ಮಾರ್ಟಿನ್ ತಂಡದ ಜೊತೆಗೆ ರೈನೋ ಚಿತ್ರ ಮಾಡುವುದು ಖಚಿತ ಆಗಿದೆ. ಇನ್ನು ಮುಂದೆ ವರ್ಷಕ್ಕೆ ಎರಡು ಸಿನಿಮಾ ಖಂಡಿತ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ನನ್ನ ಚಿತ್ರದಲ್ಲಿ ಡೈಲಾಗ್ ಗಳನ್ನು ಪ್ರೇಕ್ಷಕರು ನಿರೀಕ್ಷೆ ಮಾಡುತ್ತಾರೆ. ಫ್ಯಾಮಿಲಿ ಕೇಂದ್ರೀತ ಸಿನಿಮಾ ಬಯಸುತ್ತಾರೆ. ಆ ರೀತಿಯ ಸಿನಿಮಾಗಳನ್ನು ನಾನು ಆಯ್ದುಕೊಳ್ಳುವೆ ಎಂದಿದ್ದಾರೆ.
ಸುಮಾರು 50ರಿಂದ 60 ಕಥೆಗಳನ್ನು ಕೇಳಿದ್ದೇನೆ. ನಿರ್ದೇಶಕರು ಹೊಸಬರೇ, ಹಳವರೇ ಎನ್ನುವ ಬಗ್ಗೆ ನಾನು ಆಲೋಚನೆ ಮಾಡುವುದಿಲ್ಲ. ಕಥೆಗಳು ಮನರಂಜಿಸಬೇಕು ಎಂದು ಅವರು ಹೇಳಿದ್ದಾರೆ.
ಅರ್ಜುನ್ ಸರ್ಜಾ ಅವರ ಜೊತೆಗೆ ನಮ್ಮದೇ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ನಿರ್ಮಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಶೀಘ್ರ ಘೋಷಣೆ ಆಗಲಿದೆ. ಕೆಡಿ ಚಿತ್ರ ಬಿಡುಗಡೆ ಆಗುತ್ತಿದ್ದಂತೆ ಮತ್ತೊಂದು ಚಿತ್ರ ಸೆಟ್ಟೇರಲಿದೆ ಎಂದು ಅವರು ಹೇಳಿದ್ದಾರೆ.
ಕೆಡಿ ಚಿತ್ರದ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ಪ್ರೇಮ್, ಮುಂದಿನ ವರ್ಷ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇದು ಯಾವ ವ್ಯಕ್ತಿಗೂ ಸಂಬಂಧಿಸಿದ ಕಥೆಯಲ್ಲ. 1970ರ ರೌಡಿಸಂ ಹಿನ್ನಲೆಯ ಕಥೆ ಇದಾಗಿದೆ. ಗ್ರಾಫಿಕ್ಸ್ ಕಾರಣದಿಂದ ಚಿತ್ರ ತಡವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಕೆಡಿ ಕೆಲಸಗಳು ಸಾಕಷ್ಟಿವೆ. ದರ್ಶನ್ ಈಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅವರು ಒಪ್ಪಿಕೊಂಡ ಸಿನಿಮಾಗಳು ಇರುವ ಕಾರಣ ಅವರ ಜೊತೆ ಚಿತ್ರ ಸದ್ಯಕ್ಕೆ ಪ್ರಾರಂಭಿಸುವುದಿಲ್ಲ ಎಂದು ಪ್ರೇಮ್ ಹೇಳಿದ್ದಾರೆ.
Be the first to comment