ವಿನೂತನ ಶೀರ್ಷಿಕೆ ಹೊಂದಿರುವ ’ಧ್ರುವ 369’ ಚಿತ್ರದ ಟೀಸರ್‌ನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅನಾವರಣಗೊಳಿಸಿದರು. ನಂತರ ಮಾತನಾಡುತ್ತಾ ನಿರ್ದೇಶಕರ ಶ್ರಮ ಇದರಲ್ಲಿ ಕಂಡು ಬಂದಿದೆ. ಇಂತಹವರ ಹಾಜರಾತಿ ಪ್ರಸಕ್ತ ಚಿತ್ರರಂಗಕ್ಕೆ ಅವಶ್ಯಕವಾಗಿದೆ. ಭವಿಷ್ಯದಲ್ಲಿ ಇವರಿಗೆ ಒಳ್ಳೆ ಅವಕಾಶಗಳು ಸಿಗುವ ಲಕ್ಷಣಗಳು ಕಾಣಿಸುತ್ತಿದೆ. ಒಳ್ಳೆಯದಾಗಲಿ ಎಂದರು.
ಸುಂದರ ಸಮಯದಲ್ಲಿ ಎನ್.ಎಂ.ಸುರೇಶ್, ನಟ ರಮೇಶ್‌ಭಟ್, ಮುಂತಾದವರು ಉಪಸ್ತಿತರಿದ್ದರು. ಆಧುನಿಕ ತಂತ್ರಜ್ಞಾನದಲ್ಲಿ ಸೃಷ್ಟಿಸಿರುವ 1.40 ನಿಮಿಷದ ತುಣುಕುಗಳಲ್ಲಿ ಡಾ.ರಾಜ್‌ಕುಮಾರ್ ಮತ್ತು ಡಾ.ಪುನೀತ್‌ರಾಜ್‌ಕುಮಾರ್ ಇರುವುದು ವಿಶೇಷವಾಗಿತ್ತು. ಮಂಗಳೂರು ಉದ್ಯಮಿ ಶ್ರೀಕೃಷ್ಣ ಕಾಂತಿಲ ಅವರು ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಬರವಣಿಗೆ ಮತ್ತು ನಿರ್ದೇಶನ ಜೆ.ಕೆ.ಶಂಕರ್‌ನಾಗ್ ಅವರದಾಗಿದೆ.
ರಾಜ್ಯಪಾಲರಾಗಿ ರಾಘವೇಂದ್ರ ರಾಜ್‌ಕುಮಾರ್, ಮಾಡ್ರೆನ್ ಟೆಕ್ನಿಕ್, ವಿಜ್ಞಾನದ ಸಣ್ಣ ಸಣ್ಣ ಘರ್ಷಣೆಗೆ ಕಾರಣ ಆಗುವ ಪಾತ್ರ್ರದಲ್ಲಿ ರಮೇಶ್‌ಭಟ್ ಇವರೊಂದಿಗೆ ಸಂದೀಪ್‌ಮಲಾನಿ, ಅತೀಶ್‌ಶೆಟ್ಟಿ, ಚಂದನಾ, ನಮಿತ ಹಾಗೂ ಮಂಗಳೂರಿನ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಕೃತ(ಸತ್ಯ) ಯುಗದಲ್ಲಿ ನಡೆದಂತ ನೈಜ ಘಟನೆ ಆಧಾರಿತವಾಗಿದೆ. ಕೆಲವೊಂದು ನಕ್ಷತ್ರಗಳು ಆಕಾಶದಲ್ಲಿ ಹಾಗೆಯೇ ಉಳಿದುಕೊಂಡಿರುತ್ತದೆ. ಅದರಲ್ಲಿ ಒಂದು ಧ್ರುವ ನಕ್ಷತ್ರ ಆಗಿರುತ್ತದೆ. ಅದೇ ನಮ್ಮ ಪವರ್ ಸ್ಟಾರ್. ಇವರ ತಂದೆಯಾಗಿ ಡಾ.ರಾಜ್‌ಕುಮಾರ್ ಸೃಷ್ಟಿಸಿದ್ದು, ಇಬ್ಬರ ಬಾಂಧ್ಯವದ ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತಿದೆ. ಇದರಿಂದ ಸ್ಪೂರ್ತಿಗೊಂಡು, ಈಗಿನ ಜನಾಂಗದವರು ಏನು ಹೊಸದಾಗಿ ಕಂಡು ಹಿಡಿದರು ಎನ್ನವುದು ಸಿನಿಮಾದ ತಿರುಳು. ಪುನೀತ್ ಸರ್ ಅಭಿಮಾನಿಯಾಗಿ, ಅವರನ್ನು ಮರುಸೃಷ್ಟಿ ಮಾಡಬೇಕೆಂಬ ನನ್ನ ಪರಿಕಲ್ಪನೆಗೆ ನಿರ್ಮಾಪಕರು ಯೆಸ್ ಅಂದರು. ಸನಾತನ ಧರ್ಮಕ್ಕಿಂತ, ಪ್ರಸ್ತುತ ಸನಾತನ ವಿಜ್ಞಾನ ತಿಳಿದುಕೊಳ್ಳಬೇಕಾಗಿದೆ. ಯಾವ ರೀತಿ ಅಭಿವೃದ್ದಿಯಾಗಬೇಕು. ಅದರಂತೆ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು ಎಂಬುದನ್ನು ಹೇಳಲಾಗಿದೆ. ಶೇಕಡ 45ರಷ್ಟು ಗ್ರಾಫಿಕ್ಸ್ ಇರುತ್ತದೆ. ಕೇವಲ ಐದು ನಿಮಿಷದ ದೃಶ್ಯಗಳು ಬಾಕಿ ಇದ್ದು, ಸದ್ಯದಲ್ಲೆ ಅದು ಸಹ ಮುಗಿಯಲಿದೆ. ದೈವಿಕ ಸಂಖ್ಯೆ ಎಂದು 369 ಅಂತ ಹೇಳಲಾಗಿದೆ. ಗ್ರಹಗಳ ಬಗ್ಗೆ ಯಾರಿಗೂ ತಿಳಿಯದ ವಿಷಯಗಳನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಅಂದುಕೊಂಡಂತೆ ಆದರೆ ಸಮೇ ತಿಂಗಳಲ್ಲಿ ಜನರಿಗೆ ತೋರಿಸಲಾಗುವುದೆಂದು ಶಂಕರ್‌ನಾಗ್ ಮಾಹಿತಿ ನೀಡಿದರು.
ಮಂಗಳೂರು, ಬೆಂಗಳೂರು, ನಂದಿಬೆಟ್ಟ, ಚಿಕ್ಕಬಳ್ಳಾಪುರ, ಜವಹರಲಾಲ್ ನೆಹರು ತಾರಾಲಯ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ಸತೀಶ್‌ಬಾಬು, ಸಂಕಲನ ಸುಬ್ರಮಣ್ಯಐರೋಡಿ ಅವರದಾಗಿದೆ.

Be the first to comment