ಯುವ ನಟ ಧೀರನ್ ಅಭಿನಯದ ‘ನೈಟ್ ಕರ್ಫ್ಯೂ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಧೀರನ್ ಅವರ ಚೊಚ್ಚಲ ಚಿತ್ರ ‘ಶಿವಾ 143’ ರಿಲೀಸ್ ಆಗುವ ಮುನ್ನ ಅವರು ಅಭಿನಯಿಸುತ್ತಿರುವ ಎರಡನೇ ಚಿತ್ರದ ಕೆಲಸಗಳು ಆರಂಭ ಆಗಿವೆ. ಚಿತ್ರವನ್ನು ರವೀಂದ್ರ ವಂಶಿ ನಿರ್ದೇಶಿಸುತ್ತಿದ್ದಾರೆ.
ಚಿತ್ರ ಲಾಕ್‌ಡೌನ್ ಅವಧಿಯ ಕಥಾಹಂದರ ಹೊಂದಿದೆ. ಧೀರನ್ ಅವರು ಯುವ ವೈದ್ಯನಾಗಿ ನಟಿಸುತ್ತಿದ್ದಾರೆ. ಬಿ ಎಸ್ ಚಂದ್ರಶೇಖರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರ ತಂಡ ಯೋಜನೆ ರೂಪಿಸಿದೆ. ಫೆಬ್ರವರಿ 2022 ರಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.
ಚಿತ್ರದ ಪರೀಕ್ಷಾ ಚಿತ್ರೀಕರಣವನ್ನು ನಡೆಸಲಾಗಿದ್ದು, ಶೀಘ್ರದಲ್ಲೇ ಚಿತ್ರದ ಅಧಿಕೃತ ಘೋಷಣೆಯನ್ನು ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ರಾಜಕುಮಾರ್ಕು ಟುಂಬದಿಂದ ಬಂದ ನಟ ಧೀರನ್ ತಮ್ಮ ಚೊಚ್ಚಲ ಚಿತ್ರ ಶಿವಾ 143 ಬಿಡುಗಡೆಗೆ ಕಾಯುತ್ತಿದ್ದಾರೆ. ಜಯಕುಮಾರ್ ಫಿಲ್ಮ್ಸ್ ಬ್ಯಾನರ್ ನಲ್ಲಿ ತಯಾರಾಗಿರುವ ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ಮಾನ್ವಿತಾ ಕಾಮತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ರವೀಂದ್ರ ವಂಶಿ ಪುಟಾಣಿ ಸಫಾರಿ ಮತ್ತು ವಾಸಂತಿ ನಲಿದಾಗ ಚಿತ್ರದ ಮೂಲಕ ಗಮನ ಸೆಳೆದಿದ್ದರು.
____

Be the first to comment