ದರ್ಶನ್ ಅಭಿನಯದ 55ನೇ ಸಿನಿಮಾಕ್ಕೆ ‘ಕ್ರಾಂತಿ’ ಎಂದು ಹೆಸರಿಡಲಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಗಣೇಶ ಚತುರ್ಥಿ ಹಬ್ಬದ ದಿನದಂದು ಟೈಟಲ್ ಬಿಡುಗಡೆ ಮಾಡಲಾಗಿದ್ದು, ಪೋಸ್ಟರ್‌ನಲ್ಲಿ ದರ್ಶನ್ ಅವರ ಆಂಗ್ರಿ ಲುಕ್ ಗಮನ ಸೆಳೆಯುತ್ತಿದೆ. ಪೋಸ್ಟರ್ ಗಮನಿಸಿದಾಗ ಇದು ಆಕ್ಷನ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ.
ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಐದೂ ಭಾಷೆಗಳಲ್ಲಿ ಸಿನಿಮಾದ ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿದೆ.
ದರ್ಶನ್ ಅಭಿನಯಿಸುತ್ತಿರುವ ‘ಕ್ರಾಂತಿ’ ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರವನ್ನು ಶೈಲಜಾ ನಾಗ್, ಬಿ ಸುರೇಶ್ ನಿರ್ಮಿಸುತ್ತಿದ್ದಾರೆ. ದರ್ಶನ್ ಹೀರೋ ಆಗಿದ್ದ ‘ಯಜಮಾನ’ ಚಿತ್ರವನ್ನು ಇದೇ ತಂಡ ನಿರ್ಮಾಣ ಮಾಡಿತ್ತು. ವಿ.ಹರಿಕೃಷ್ಣ ಅವರಿಗೆ ನಿರ್ದೇಶಕರಾಗಿ ಇದು ಎರಡನೇ ಸಿನಿಮಾ ಆಗಿದ್ದು ಸಂಗೀತ ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ.
ದರ್ಶನ್ ರಾಬರ್ಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಕೊನೆಯದಾಗಿ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ‘ರಾಬರ್ಟ್’ ಬಳಿಕ ದರ್ಶನ್ ‘ರಾಜವೀರ ಮದಕರಿನಾಯಕ’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರು. ಕೊರೋನ ಹಿನ್ನೆಲೆಯಲ್ಲಿ ಈ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಈ ಸಿನಿಮಾವನ್ನು ರಾಜೇಂದ್ರ ಬಾಬು ನಿರ್ದೇಶನ ಮಾಡುತ್ತಿದ್ದಾರೆ.
____________

Be the first to comment