ಬಾಲಿವುಡ್ ದಂತಕಥೆ ಧರ್ಮೇಂದ್ರ ನಿಧನಕ್ಕೆ ಹಿಂದಿ ಚಿತ್ರರಂಗ ಶೋಕಿಸುತ್ತಿದ್ದು, ಇಡೀ ಉದ್ಯಮ ಮತ್ತು ಧರ್ಮೇಂದ್ರ ಅವರ ಅಭಿಮಾನಿಗಳು ದುಃಖದಲ್ಲಿ ಮುಳುಗಿದ್ದಾರೆ.
ಧರ್ಮೇಂದ್ರ ವಯೋಸಹದ ಆರೋಗ್ಯ ಸಮಸ್ಯೆಗಳಿಂದ ಜುಹುವಿನ ತಮ್ಮ ನಿವಾಸದಲ್ಲಿ 89 ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿರ್ಗಮನ ಚಿತ್ರರಂಗದಲ್ಲಿ ಮಾತ್ರವಲ್ಲದೆ ಅವರನ್ನು ನೋಡುತ್ತಾ ಬೆಳೆದ ಲಕ್ಷಾಂತರ ಜನರ ಹೃದಯಗಳಲ್ಲಿ ಶೂನ್ಯವನ್ನುಂಟುಮಾಡಿದೆ.
ನವೆಂಬರ್ 1 ರಿಂದ ಧರ್ಮೇಂದ್ರ ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೆಲ ದಿನ ಇದ್ದ ನಂತರ ಅವರ ಕುಟುಂಬ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬಂದು ನೋಡಿಕೊಳ್ಳುತ್ತಿದ್ದರು. ಅವರ ಅಂತ್ಯಕ್ರಿಯೆಯನ್ನು ನಿನ್ನೆ ಪವನ್ ಹ್ಯಾನ್ಸ್ ಸ್ಮಶಾನದಲ್ಲಿ ನಡೆಸಲಾಯಿತು.
ಶೋಲೆ ಮತ್ತು ಚುಪ್ಕೆ ಚುಪ್ಕೆ ಸಹನಟನನ್ನು ನೆನಪಿಸಿಕೊಳ್ಳುತ್ತಾ ಅಮಿತಾಬ್ ಬಚ್ಚನ್ “ಮತ್ತೊಬ್ಬ ಧೀರ ದೈತ್ಯ ನಮ್ಮನ್ನು ಅಗಲಿದ್ದಾರೆ. ಅಖಾಡವನ್ನು ತೊರೆದಿದ್ದಾರೆ. ಅಸಹನೀಯ ಶಬ್ದದೊಂದಿಗೆ ಮೌನವನ್ನು ಬಿಟ್ಟು.. ಧರಮ್ ಜಿ” ಎಂದು ಬರೆದಿದ್ದಾರೆ.
ಧರ್ಮೇಂದ್ರ 1960 ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಶೋಲೆ, ಧರಮ್ ವೀರ್, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್, ಡ್ರೀಮ್ ಗರ್ಲ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿಗಳಿಸಿದರು.
ಧರ್ಮೇಂದ್ರ ಅವರ ಕೊನೆಯ ಚಿತ್ರ ಇಕ್ಕಿಸ್. ಅಗಸ್ತ್ಯ ನಂದಾ ಮತ್ತು ಜೈದೀಪ್ ಅಹ್ಲಾವತ್ ನಟಿಸಿದ್ದು ಈ ಚಿತ್ರ ಕ್ರಿಸ್ಮಸ್ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
—





Be the first to comment