ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರು ಮುಂಬೈಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದು, ವೈದ್ಯರ ನಿಗಾದಲ್ಲಿ ಇದ್ದಾರೆ.  ಅವರು ನಿಯಮಿತ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೆಚ್ಚಿನ ಪರೀಕ್ಷೆಗಳಿಗಾಗಿ ಅಲ್ಲಿಯೇ ಉಳಿದುಕೊಂಡಿದ್ದಾರೆ.

ಧರ್ಮೇಂದ್ರ ಅವರ ಆರೋಗ್ಯದ ಬಗ್ಗೆ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಸಾರ್ವಜನಿಕರಲ್ಲಿ ಕುಟುಂಬ ಮನವಿ ಮಾಡಿಕೊಂಡಿದೆ. 89 ವರ್ಷದ ನಟ ಹೆಚ್ಚುವರಿ ಟೆಸ್ಟ್​ ಹಿನ್ನೆಲೆ ಅಲ್ಲೇ ಇದ್ದಾರೆ. ಅವರ ಡಿಸ್ಚಾರ್ಜ್ ದಿನಾಂಕದ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಸೂಪರ್‌ ಸ್ಟಾರ್ ಧರ್ಮೇಂದ್ರ  ಡಿಸೆಂಬರ್‌ನಲ್ಲಿ ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್  ತಮ್ಮ ತಂದೆಯೊಂದಿಗೆ ಇರಲು ತಮ್ಮ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ.

ಧರ್ಮೇಂದ್ರ ಅವರು ಕೊನೆಯದಾಗಿ 2024ರಲ್ಲಿ ತೆರೆಕಂಡ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಮುಖ್ಯಭೂಮಿಕೆಯ ‘ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಕಾಣಿಸಿಕೊಂಡರು.  ಮುಂದೆ   ಶ್ರೀರಾಮ್ ರಾಘವನ್ ನಿರ್ದೇಶನದ, ಅಗಸ್ತ್ಯ ನಂದಾ ಮತ್ತು ಸಿಮರ್ ಭಾಟಿಯಾ ನಟನೆಯ ‘ಇಕ್ಕಿಸ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!