‘ಧರ್ಮಸ್ಥಳ ನಿಯೋಜಿಕವರ್ಗ್’ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಪ್ರೇಕ್ಷಕರ ಗಮನ ಸೆಳೆಯುತ್ತಿರುವ ‘ಧರ್ಮಸ್ಥಳ ನಿಯೋಜಿಕವರ್ಗ್’  ಸಿನಿಮಾದ ಫಸ್ಟ್ ಲುಕ್ ಪೋಸ್ಟರ್  ಬಿಡುಗಡೆ ಆಗಿದೆ.

ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡ ಹೊಸ ವರ್ಷದ ಶುಭಾಶಯ ಕೋರಿದೆ. ಸಿನಿಮಾದಲ್ಲಿ ರಾಜಕೀಯ ಹಿನ್ನೆಲೆಯ ಕಥಾಹಂದರ ಇರಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.

ಹಿರಿಯ ನಟರಾದ ಸುಮನ್ ಮತ್ತು ಸಾಯಿ ಕುಮಾರ್, ನಟರಾಜ್, ವರುಣ್ ಸಂದೇಶ್ ಹಾಗೂ ವಿತಿಕಾ ಶೇರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿವೆ ಎಂದು ಚಿತ್ರತಂಡ ತಿಳಿಸಿದೆ.

‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾವನ್ನು   ‘ಮೂವಿಂಗ್ ಡ್ರೀಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಬ್ಯಾನರ್ ಮೂಲಕ ಮೇರುಂ ಭಾಸ್ಕರ್ ಅವರು ನಿರ್ಮಾಣ ಮಾಡಿದ್ದಾರೆ. ಜೈ ಜ್ಞಾನ ಪ್ರಭಾ ತೋಟ ಅವರು ನಿರ್ದೇಶನ ಮಾಡಿದ್ದಾರೆ.

“ನಮ್ಮ ಸಿನಿಮಾ ವಿಭಿನ್ನ ರಾಜಕೀಯ ಹಾಗೂ ಎಮೋಷನಲ್ ಎಂಟರ್ಟೈನರ್ ಆಗಿದೆ. ಆರಂಭದಿಂದ ಅಂತ್ಯದವರೆಗೆ ಕುತೂಹಲಕಾರಿಯಾದ ತಿರುವುಗಳು ಇರಲಿವೆ” ಎಂದು ನಿರ್ದೇಶಕ ಜೈ ಜ್ಞಾನ ಪ್ರಭಾ ತೋಟ ಹೇಳಿದ್ದಾರೆ.

ವೆಂಕಟ ಹನುಮ ಛಾಯಾಗ್ರಹಣ, ನಂದು ಮಾಸ್ಟರ್ ಸಾಹಸ ನಿರ್ದೇಶನ, ಸೃಷ್ಟಿ ವರ್ಮಾ ನೃತ್ಯ ನಿರ್ದೇಶನ, ಅಸ್ಲಂ ಸಂಭಾಷಣೆ, ಸಾಯಿ ಬಾಬು ತಲಾರಿ ಸಂಕಲನ, ಭಾರ್ಗವಾಚಾರಿ ನೌಂಡ್ಲಾಸ್ ಅವರ ಕಲಾ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!