Hampi Express Movie : ‘ಹಂಪಿ ಎಕ್ಸ್ ಪ್ರೆಸ್’ ಹೀರೋ ಧರ್ಮಣ್ಣ

‘ರಾಜಯೋಗ’ ಚಿತ್ರದ ನಂತರ ಧರ್ಮಣ್ಣ ಕಡೂರು ಇನ್ನೊಂದು ಹೊಸ ಚಿತ್ರದಲ್ಲಿ ಹೀರೋ ಆಗುತ್ತಿದ್ದಾರೆ!

ಹೊಸ ಚಿತ್ರ  ‘ಹಂಪಿ ಎಕ್ಸ್ಪ್ರೆಸ್‍’ ಗೆ ಪಾಟೀಲ್‍ ಲಿಂಗನಗೌಡ ಹರಪನಹಳ್ಳಿ ಕಥೆ, ಚಿತ್ರಕಥೆ ರಚಿಸುವುದರ ಜೊತೆಗೆ ಚಿತ್ರದ ನಿರ್ದೇಶನವನ್ನೂ ಮಾಡುತ್ತಿದ್ದಾರೆ.  ಹಂಪಿ ಟಾಕೀಸ್‍ ಬಳಗ  ಚಿತ್ರವನ್ನು ನಿರ್ಮಿಸುತ್ತಿದೆ. ಚಿತ್ರದ ಪೂಜೆಯಾಗಿದ್ದು, ಯೋಗರಾಜ್‍ ಭಟ್‍ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಕೋರಿ ಕಳಿಸಿದ್ದಾರೆ.

ಇದೊಂದು ನೈಜ ಘಟನೆಯನ್ನು ಆಧರಿಸಿ ಮಾಡಿರುವ ಕಥೆ. ಚಿತ್ರದಲ್ಲಿ ಎರಡು ಕಥೆಗಳನ್ನು ಹೇಳೋಕೆ ನಿರ್ದೇಶಕರು ಹೊರಟಿದ್ದಾರೆ . ಒಂದು ಕಥೆ ಒಬ್ಬ ಸ್ಕೂಲ್‍ ಮಾಸ್ಟರ್‍ನದ್ದಾದರೆ, ಇನ್ನೊಂದು ಕತೆ ಫೋಟೋಗ್ರಾಫರ್‍ನದು.  ಧರ್ಮಣ್ಣ ಫೋಟೋಗ್ರಾಫರ್‍ ಪಾತ್ರ ಮಾಡುತ್ತಿದ್ದಾರೆ.

ಚಿತ್ರದ ಚಿತ್ರೀಕರಣ ಹಂಪಿ ಮತ್ತು ಆನೆಗುಂದಿ ಸುತ್ತಮುತ್ತ ನಡೆಯಲಿದೆ.  ಚಿತ್ರದಲ್ಲಿ  ರಾಮ್‍ ನಾಡಗೌಡ, ಪದ್ಮಶ್ರೀ ಮಂಜಮ್ಮ ಜೋಗತಿ, ಮಹಾಂತೇಶ್‍ ಹೀರೇಮಠ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನು ಪ್ರಸಾದ್‍ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

‘ರಾಜಯೋಗ’ ಚಿತ್ರದ ನಂತರ ಒಂದಷ್ಟು ಚಿತ್ರಗಳಲ್ಲಿ ಪೋಷಕ ಪಾತ್ರ  ಒಪ್ಪಿದ್ದ ಧರ್ಮಣ್ಣ ಈಗ ‘ ‘ಹಂಪಿ ಎಕ್ಸ್ಪ್ರೆಸ್‍’ ಚಿತ್ರದಲ್ಲಿ ಹೀರೋ ಆಗುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!