ಟಿವಿ9 ಎಕ್ಸ್ಪೋ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿದೆ. ಮಾರ್ಚ್ 6, 7, 8 ಮೂರು ದಿನ ಇದು ಇರಲಿದೆ. ಆಟೋಮೊಬೈಲ್, ಲೈಫ್ಸ್ಟೈಲ್, ಫರ್ನಿಚರ್ಗಳ ಮಾರಾಟ ನಡೆಯಲಿದ್ದು, ಒಂದೇ ಸೂರಿನಡಿ ನೂರಾರು ಮಳಿಗೆಗಳ ಸಂಗಮ ಆಗಿದೆ.
ಇದಕ್ಕೆ ನಟ ಧನ್ವೀರ್ ಹಾಗೂ ಸಂಜನಾ ಆಗಮಿಸಿ ಚಾಲನೆ ನೀಡಿದರು. ಈ ವೇಳೆ ಅವರುಗಳು ಟಿವಿ9 ಎಕ್ಸ್ಪೋ ಬಗ್ಗೆ ಹಾಗೂ ಹಯಗ್ರೀವ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ಅವರು ಖುಷಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಧನ್ವೀರ್ ಎಲ್ಲಾ ತರದ ಮನೆಗೆ ಸಂಬಂಧಪಟ್ಟ ಆಟೋಮೊಬೈಲ್ಸ್ ಆಗಿರಬಹುದು ಫರ್ನಿಚರ್ ಆಗಿರಬಹುದು ಪ್ರತಿಯೊಂದು ಒಂದೇ ಜಾಗದಲ್ಲಿ ಸಿಗೋದ್ರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗುತ್ತೆ ಎಂದರು.
ಅದಲ್ಲದೆ ಹಯಗ್ರೀವ ಸಿನಿಮಾ ಎಲ್ಲೆಡೆ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಕಾರಣ ಅದರ ಕುರಿತು ಸಂತೋಷ ಹಂಚಿಕೊಂಡರು.
ನಟಿ ಸಂಜನಾ ಮಾತನಾಡಿ ಹಯಗ್ರೀವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತುಂಬಾ ಖುಷಿಯಾಗಿದೆ. ಎಲ್ಲಾ ಕಡೆ ಓಡಾಡ್ತಾ ಇದೀವಿ ಪಾಸಿಟಿವ್ ಆಗಿ ರೆಸ್ಪಾನ್ಸ್ ಇದೆ ಎಲ್ಲಾ ಕಡೆ ಆಲ್ಮೋಸ್ಟ್ ಹೌಸ್ ಫುಲ್ಸ್ ಓಡ್ತಾ ಇದೆ ಅಂಡ್ ಟಿವಿ೯ ಈ ಒಂದು ಎಕ್ಸ್ಪೋ ನಲ್ಲಿ ಒಂದೇ ರೂಫ್ ಅಡಿ ಎಲ್ಲಾ ಸಿಗುತ್ತಿರುವುದು ಮತ್ತು ಯುಗಾದಿ ಸೇಲ್ ನಡೆಯುತ್ತಿರುವುದು ವಿಶೇಷ ಎಂದು ಖುಷಿಯಿಂದ ಹೇಳಿದ್ದಾರೆ.





Be the first to comment