ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆಪ್ತ ಧನ್ವೀರ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಡಿಯೋ ಬಿಡುಗಡೆಯಿಂದಾಗಿ ಪೊಲೀಸ್ ಇಲಾಖೆಗೆ ಮುಜುಗರ ಉಂಟಾದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಧನ್ವೀರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಡಿಯೋ ಧನ್ವೀರ್ ಅವರಿಂದ ರಿಲೀಸ್ ಆದ ಅನುಮಾನವನ್ನು ಆಧರಿಸಿ ತನಿಖೆ ನಡೆಯುತ್ತಿದೆ.
ಭಾನುವಾರದಿಂದಲೇ ಧನ್ವೀರ್ ವಿಚಾರಣೆ ನಡೆಯುತ್ತಿದ್ದು ಅವರ ಮೊಬೈಲ್ ಫೋನ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಅವರ ಬಳಿ ಆ ರೀತಿಯ ಯಾವುದೇ ವಿಡಿಯೋ ಪತ್ತೆ ಆಗಿಲ್ಲ. ಹಾಗಾಗಿ ವಿಚಾರಣೆ ನಡೆಸಿ ಅವರನ್ನು ಸಿಸಿಬಿ ಪೊಲೀಸರು ಕಳುಹಿಸಿದ್ದಾರೆ.
ದರ್ಶನ್ ಪರ ವಕೀಲರು ಸಲ್ಲಿಸಿದ್ದ ಜೈಲಿನಲ್ಲಿನ ಸೌಲಭ್ಯ ಕುರಿತ ಅರ್ಜಿ ವಿಚಾರಣೆ ವೇಳೆ, “ಇತರ ಕೈದಿಗಳಿಗೆ ವಿವಿಧ ಸವಲತ್ತುಗಳು ಲಭ್ಯವಾಗುತ್ತಿವೆ. ಆದರೆ ದರ್ಶನ್ ಅವರಿಗೆ ಮಾತ್ರ ನೀಡಲಾಗುತ್ತಿಲ್ಲ” ಎಂಬ ವಾದವನ್ನು ಮುಂದಿಟ್ಟಿದ್ದರು.
ಸಿಸಿಬಿ ಅಧಿಕಾರಿಗಳು ಈಗ ವಿಡಿಯೋ ಸೋರಿಕೆಯ ಮೂಲ ಮತ್ತು ಭಾಗಿಯಾಗಿರುವವರ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.
—–





Be the first to comment