Dhanush: ಸಿನಿಮಾ ಆಗಲಿದೆ ಇಳಯರಾಜ ಜೀವನಚರಿತ್ರೆ

ಸಂಗೀತ ಮಾಂತ್ರಿಕ ಇಳಯರಾಜ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರ ತೆರೆಗೆ ಬರಲಿದೆ.

ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ಧನುಷ್ ಅವರು ಇಳಯರಾಜ ಅವರ ಪಾತ್ರವನ್ನು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಇದು ಪ್ಯಾನ್ ಇಂಡಿಯಾ ಯೋಜನೆಯಾಗಿದ್ದು ಮುಂದಿನ ವರ್ಷ ಚಿತ್ರಿಕರಣ ಆರಂಭವಾಗಲಿದೆ ಎಂದು ಹೇಳಲಾಗಿದೆ.

ಈ ಚಿತ್ರವನ್ನು ಕನೆಕ್ಟ್ ಮೀಡಿಯಾ ನಿರ್ಮಿಸಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ಧನುಷ್ ಅವರು ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಳಯರಾಜ ಅವರ ಅಭಿಮಾನಿ ಆಗಿರುವ ಧನುಷ್ ಅವರಿಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಅದೃಷ್ಟ ಎಂದು ಪರಿಗಣಿಸಲಾಗಿದೆ.

ಸಂಗೀತ ಮಂತ್ರಿಕ ಇಳಯರಾಜ ಅವರು ಇದುವರೆಗೆ 10,000ಕ್ಕೂ ಹೆಚ್ಚು ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ ಕೀರ್ತಿಯನ್ನು ಹೊಂದಿದ್ದಾರೆ. ತಮಿಳುನಾಡಿನ ಒಂದು ಹಳ್ಳಿಯಲ್ಲಿ ಹುಟ್ಟಿದ ಅವರು ತಮಿಳು ಅಲ್ಲದೆ ಕನ್ನಡ, ಮಳಿಯಾಳಂ, ತೆಲುಗು ಹಾಗೂ ಮರಾಠಿ ಸೇರಿದಂತೆ 3000ಕ್ಕೂ ಹೆಚ್ಚಿನ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ ನೀಡಲಾಗಿದೆ.

ಇಳಯರಾಜ ಅವರು ಒಟ್ಟು ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡಕ್ಕೆ ಸಂಬಂಧಿಸಿದಂತೆ ಅವರು ನನ್ನ ನೀ ಗೆಲ್ಲಲಾರೆ, ಪಲ್ಲವಿ ಅನುಪಲ್ಲವಿ, ನಮ್ಮೂರ ಮಂದಾರ ಹೂವೇ, ಗೀತಾ ಮೊದಲಾದ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಜನಮನ್ನಣೆಯನ್ನು ಪಡೆದಿದ್ದಾರೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!