ಕನ್ನಡ ಚಿತ್ರರಂಗದಲ್ಲಿ ಪಾರ್ಟಿ ಹಾಡುಗಳ ಮೂಲಕ ಗಮನ ಸೆಳೆದ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಇದೀಗ ಹೊಸ ವರ್ಷಕ್ಕೆ ಕಿಕ್ ಕೊಡುವ ಹಾಡಿನ ಮೂಲಕ ಬಂದಿದ್ದಾರೆ. ಈ ಹಿಂದೆ ಮೂರೇ ಮೂರು ಪೆಗ್ಗಿಗೆ, ಟಕೀಲಾ ಪಾರ್ಟಿ ಸಾಂಗ್‌ಗಳ ಮೂಲಕ ಕೋಟ್ಯಂತರ ಜನರ ಹೃದಯ ಕದ್ದ ಚಂದನ್ ಶೆಟ್ಟಿ, ಈಗ ವೀಕೆಂಡ್ನಲ್ಲಿ ಕುಣಿದು ಕುಪ್ಪಳಿಸುವ ಪಾರ್ಟಿ ಫ್ರೀಕ್ ಎಂಬ ಆಲ್ಬಂ ಹಾಡನ್ನು ಹೊರ ತಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ನಟ ಧರ್ಮ ಹಾಗೂ ಯುನೈಟ್ ಆಡಿಯೋ ಕಂಪನಿ ಮಾಲೀಕರಾದ ಚೈತನ್ಯ ಲಕಂಸಾನಿ ಈ ಪಾರ್ಟಿ ಫ್ರೀಕ್ ಹಾಡಿನ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡ್ರು. ವೀಕೆಂಡ್ ಪಾರ್ಟಿ ಗಮನದಲ್ಲಿಟ್ಟುಕೊಂಡು ಚಂದನ್ ಶೆಟ್ಟಿ ಸಾಹಿತ್ಯ ಬರೆದು ಅಷ್ಟೇ ಕ್ಯಾಚಿ ಟ್ಯೂನ್ ಹಾಕುವ ಮೂಲಕ ಸಖತ್ ಸ್ಟೆಪ್ ಹಾಕಿದ್ದಾರೆ.
ನಟಿ ನಿಶ್ವಿಕಾ ನಾಯ್ಡು ಈ ಕಲರ್‌ಫುಲ್ ಹಾಡಿನಲ್ಲಿ ಮಸ್ತ್ ಡಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಸಹ ಕಾಣಿಸಿಕೊಂಡಿದ್ದಾರೆ. ನಟ ಧರ್ಮ ಕೂಡ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಅದ್ಧೂರಿ ವೆಚ್ಚದಲ್ಲಿ ಈ ಪಾರ್ಟಿ ಫ್ರೀಕ್ ಹಾಡನ್ನು ಚಿತ್ರೀಕರಣ ಮಾಡಿದ್ದಾರೆ.
ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ನಲ್ಲಿ ಈ ಪಾರ್ಟಿ ಫ್ರೀಕ್ ಹಾಡನ್ನ ನೂರಾರು ಡ್ಯಾನ್ಸರ್ ಜೊತೆ ಚಂದನ್ ಶೆಟ್ಟಿ ಹಾಗೂ ನಿಶ್ವಿಕಾ ನಾಯ್ಡು ಡ್ಯಾನ್ಸ್ ಮಾಡಿದ್ದು, ಮೂರು ದಿನ ಈ ಹಾಡನ್ನು ಚಿತ್ರೀಕರಿಸಲಾಗಿದೆ.
ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜಿತ್ ಶ್ರೀರವಿ ವಸ್ತ್ರ ವಿನ್ಯಾಸ ಮಾಡಿಲಿದ್ದು, ನೃತ್ಯ ನಿರ್ದೇಶಕ ಮೋಹನ್ ಈ ಪಾರ್ಟಿ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನು ಆಂಧ್ರ ಮೂಲದವಾರದ ಚೈತನ್ಯ ಲಕಂಸಾನಿ, ಯುನೈಟ್ ಆಡಿಯೋಸ್ ಸಂಸ್ಥೆ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಇನ್ನು ಈ ಪಾರ್ಟಿ ಹಾಡಿನಲ್ಲಿ ಒಬ್ಬರಾಗಿರುವ ಧರ್ಮ ಹೇಳುವ ಹಾಗೆ, ಬರೋಬ್ಬರಿ 40 ಲಕ್ಷ ರೂ. ವೆಚ್ಚದಲ್ಲಿ ಈ ಹಾಡನ್ನು ಕನ್ನಡ, ತೆಲುಗಿನಲ್ಲಿ ನಿರ್ಮಾಣ ಮಾಡಲಾಗಿದೆ. ಅದ್ಧೂರಿ ಸೆಟ್ನಲ್ಲಿ ಮೂಡಿಬಂದಿರುವ ಈ ಪಾರ್ಟಿ ಫ್ರೀಕ್ ಹಾಡು ಹೊಸ ವರ್ಷಕ್ಕೆ ಕಿಕ್ ಏರಿಸುವ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ.
Be the first to comment