ಪಿ.ಪ್ರೊಡಕ್ಷನ್ಸ್ ಬ್ಯಾನರ್ ನಡಿ ಆನಂದ್ ಬಾಬು ನಿರ್ಮಾಣದಲ್ಲಿ ತಯಾರಾಗಿರುವ ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.
A2ಆಡಿಯೋ ಕಂಪನಿಗೆ ಆಡಿಯೋ ರೈಟ್ಸ್ ಮಾರಾಟವಾಗಿದ್ದು, ಇದು ನಿರ್ಮಾಪಕರಿಗೆ, ಇಡೀ ಸಿನಿಮಾ ತಂಡಕ್ಕೆ ಸಂತಸ ತಂದಿದೆ.
ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ಎ. ಆರ್. ಸಾಯಿರಾಮ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರದಲ್ಲಿ 5 ಹಾಡು, 5 ಪೈಟ್ ಇವೆ. ಜುಡಾ ಸ್ಯಾಂಡಿ ದೇಸಿ ಸಂಗೀತ ಸಿನಿಮಾಕ್ಕಿದೆ.
ಕಿನ್ನಲ್ ರಾಜ್, ಅರಸು ಅಂತಾರೆ, ಹೃದಯ ಶಿವ, ಎ. ಆರ್.ಸಾಯಿರಾಮ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರವಿ ಕುಮಾರ್ ಸನ ಛಾಯಾಗ್ರಹಣ ,ಶ್ರೀಕಾಂತ್ ಸಂಕಲನ ಮಾಡಿದ್ದಾರೆ, ಕುಂಗ್ಪು ಚಂದ್ರು ಸಾಹಸ ನಿರ್ದೇಶನ ಚಿತ್ರಕ್ಕಿದೆ.
ತಾರಾಗಣದಲ್ಲಿ ಯಶ್ ಶೆಟ್ಟಿ, ಬಲರಾಜವಾಡಿ, ವಿವನ್ ಕೆ.ಕೆ. ಅನುಷಾ ರೈ, ಪ್ರದೀಪ್ ಪೂಜಾರಿ, ರಾಮ್ ಪವನ್, ವರ್ಧನ್ ತೀರ್ಥಹಳ್ಳಿ, ಚಕ್ರವರ್ತಿ ಚಂದ್ರಚೂಡ್ ಅಭಿನಯಿಸಿದ್ದಾರೆ. ಡಿಸೆಂಬರ್ ವಾರಾಂತ್ಯದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.
___





Be the first to comment