“ಕಲಾಯನ ಸ್ಕೂಲ್ ಆಫ್ ಪಫಾರ್ಮಿಂಗ್ ಆರ್ಟ್ಸ್ ಬೆಂಗಳೂರು” ಇದರ ಸ್ಥಾಪಕರು ಹಾಗೂ ಮಾರ್ಗದರ್ಶಕರಾದ ಶ್ರೀ ದೇವುರೂಪಾಂತರ (ದೇವರಾಜು.ಬಿ.ವಿ) ನಮಗೆಲ್ಲರಿಗೂ ಗೊತ್ತಿರುವಂತೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ಕಲಾವಿದರು.
ಆಶ್ಚರ್ಯದ ವಿಷಯವೆಂದರೆ, ಇವರು ಅತ್ಯುತ್ತಮ ಭರತನಾಟ್ಯ ಕಲಾವಿದರೇ ಅಲ್ಲದೇ ಭರತನಾಟ್ಯ ಗುರುಗಳೂ ಹೌದು. ಬೆಂಗಳೂರಿನ ಜಯನಗರದ ಜೆಎಸ್ಎಸ್ ರಂಗಮoದಿರದಲ್ಲಿ ಕು.ರೂಪಶ್ರೀ. ಕೆ ಇವರ ಭರತನಾಟ್ಯ ರಂಗಪ್ರವೇಶ ಆಯೋಜಿಸಲ್ಪಟ್ಟಿತ್ತು.
ಈ ಕಾರ್ಯಕ್ರಮದಲ್ಲಿ ಕು.ರೂಪಶ್ರೀ.ಕೆ ತಮ್ಮ ನೃತ್ಯ ಕಾರ್ಯಕ್ರಮವನ್ನು ಗಣೇಶ ಶಿವಸ್ತುತಿಯೊಂದಿಗೆ ಆರಂಭಿಸಿದರು. ರಂಜನೀಮಾಲಾ ಎಂಬ ಕೃತಿಯೊಂದಿಗೆ ಮುಂದುವರೆದು, ಸುಬ್ರಹ್ಮಣ್ಯನ ಮೇಲೆ ರಚಿತವಾದ “ತಂಡೈ ಮುಳಂಗ” ಎಂಬ ಶಬ್ಧಂ ಪ್ರತುತಪಡಿಸಿದರು. ಶ್ರೀಕೃಷ್ಣ ಕಮಲಾನಾಥೋ ಎಂಬ ವರ್ಣಂ ನರ್ತಿಸಿ, ತನ್ನ ಗುರುಗಳ ಬೋಧನಾ ಸಾಮರ್ಥ್ಯ ಹಾಗೂ ತನ್ನ ಕ್ಷಮತೆಯನ್ನು ವ್ಯಕ್ತಪಡಿಸಿದರು. ದ್ವಿತೀಯಾರ್ಧದಲ್ಲಿ ಹರಿಹರ ಕವಿಯ ಗುಂಡಯ್ಯನ ರಗಳೆಯನ್ನು ಅದ್ಭುತವಾಗಿ ನರ್ತಿಸಿದರು. ಮುಂದೆ ಹನುಮಂತದೇವ ನಮೋ ಎಂಬ ದೇವರನಾಮವನ್ನು ಸಂಚಾರಿಗಳೊOದಿಗೆ ನರ್ತಿಸಿ ಪ್ರೇಕ್ಷಕರ ಮನಗೆದ್ದರು.
ಸುಮನೇಶ ರಂಜನಿ ತಿಲ್ಲಾನ ಹಾಗೂ ಮಂಗಳOನೊOದಿಗೆ ರಂಗಪ್ರವೇಶ ಸುಸೂತ್ರವಾಗಿ ಮುಗಿಯಿತು. ದೇವುರೂಪಾಂತರ ರವರ ಗರಡಿಯಲ್ಲಿ ಕು.ರೂಪಶ್ರೀ.ಕೆ ಅದ್ಭುತವಾದ ನೃತ್ಯಗಾರ್ತಿಯಾಗಿದ್ದಾಳೆ. ಎಂದರೆ ತಪ್ಪಾಗಲಾರದು.
ದೇವುರವರ ಅದ್ಭುತ ನಟ್ಟುವಾಂಗಕ್ಕೆ ತನ್ನ ಪ್ರೌಢ ಅಭಿನಯ ಹಾಗೂ ನೃತ್ಯವನ್ನು ಪ್ರದರ್ಶಿಸಿದ ಕು.ರೂಪಶ್ರೀ ರಂಗಪ್ರವೇಶ ಚಪ್ಪಾಳೆಗಳಿಂದ ತುಂಬಿ ಹೋಗಿತ್ತು. ಪ್ರತಿಯೊಂದು ಜತಿಗೂ ಚಪ್ಪಾಳೆ, ಪ್ರತಿಯೊಂದು ಸಂಚಾರಿಗೂ ಚಪ್ಪಾಳೆ. ಹೀಗೆ ಅತ್ಯದ್ಭುತವಾಗಿ ನೆರವೇರಿದ ರಂಗಪ್ರವೇಶದಲ್ಲಿ ಹಿಮ್ಮೇಳದಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ. ವಿದ್ವಾನ್ ಜಯರಾಮ್ ಕಿಕ್ಕೇರಿ, ವಿದ್ವಾನ್, ಶ್ರೀಹರಿ ರಂಗಸ್ವಾಮಿ, ವಿದ್ವಾನ್ ಗೋಪಾಲ್ ವೆಂಕಟರಮಣ, ವಿದ್ವಾನ್ ಅರುಣ್ ನೃತ್ಯಕಾರ್ಯಕ್ರಮಕ್ಕೆ ಅದ್ಭುತವಾದ ಸಂಗೀತ ಸಹಕಾರ ನೀಡಿದರು.
Be the first to comment