ಕುಮಾರಿ ಸುರಭಿ ಸೋಮಶೇಖರ್ ರಂಗಪ್ರವೇಶ!

ಬೆಂಗಳೂರು : ಬಾಲ್ಯದಿಂದಲೂ ಭರತನಾಟ್ಯ ಕಲಿತಿರುವ ಸುರಭಿ ಸೋಮಶೇಖರ್ ನವೆಂಬರ್ ೨೧ರಂದು ಗುರುಗಳು ಹಾಗೂ ಹಿರಿಯರ ಆಶೀರ್ವಾದದಿಂದ ರಂಗಪ್ರವೇಶ ಮಾಡಿದರು.

ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಬದುಕಿನ ಭಾಗವಾಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಸುರಭಿ ಸೋಮಶೇಖರ್ ಬಾಲ್ಯದಿಂದಲೂ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.
ನವೆಂಬರ್ ೨೧ರಂದು ಸಂಜೆ ೫.೩೦ಕ್ಕೆ ಜೆಎಸ್‌ಎಸ್ ಆಡಿಟೋರಿಯಮ್ ಜಯನಗರ, ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡಿದರು .

ಕಲಾಯನ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಬೆಂಗಳೂರು ಇದರ ನಿರ್ದೇಶಕರಾದ ಶ್ರೀ ದೇವು ರೂಪಾಂತರ ( ದೇವರಾಜು ಬಿ ವಿ) ಇವರ ಶಿಷ್ಯೆಯಾದ ಕುಮಾರಿ ಸುರಭಿ ಸೋಮಶೇಖರ ತರಬೇತಿ ನೀಡಿ, ನೃತ್ಯದಲ್ಲಿ ತಮ್ಮದೇ ಛಾಪು ಮೂಡಿಸಲು ಸಹಕರಿಸಿದ್ದಾರೆ.

ಕು.ಸುರಭಿ ಸೋಮಶೇಖರ್ ಅದ್ಭುತವಾಗಿ ಪುಷ್ಪಾಂಜಲಿಯನ್ನು ನರ್ತಿಸಿ ಅಮೋಘ ಆಭಿನಯದಿಂದ ಚೂರ್ಣಿಕೆಯನ್ನು ಅಭಿನಯಿಸಿದರು. ತ್ಯಾಗರಾಜರ ಶ್ರೀಗಣಪತಿನಿ ಸೇವಿಂಪರಾರೆ ಎಂಬ ಕೃತಿಯನ್ನು ನರ್ತಿಸಿ ಪ್ರೇಕ್ಷಕರ ಗಮನ ಸೆಳೆದ ಕು.ಸುರಭಿ ಸೋಮಶೇಖರ್, ಸರಸಿ ಜಾಕ್ಷುಲು ಎಂಬ ಶಬ್ಧಂ ಅಭಿನಯಿಸಿ ದೀರ್ಘವಾದ ಚಪ್ಪಾಳೆಗಿಟಿಸಿಕೊಂಡರು. ಮುಂದೆ ಸನ್ನುತಾಂಗಿ ಚಾಮುಂಡೇಶ್ವರಿ ಎಂಬ ಧರುವರ್ಣದಲ್ಲಿ ತಾಯಿ ಚಾಂಮುಂಡಿ ಮಹಿಷಾಸುರನನ್ನು ವಧಿಸಿದ ಸಂಚಾರಿಯನ್ನು ಪ್ರದರ್ಶಿಸಿ ತನ್ನ ಅಭಿನಯ ಚತುರತೆಯನ್ನು ಮನ ಮುಟ್ಟಿಸಿದರು. ಶ್ರೀ ದೇವರಾಜುರವರ ನಟುವಾಂಗದ ಪ್ರೌಢಿಮೆಗೆ ಪ್ರೇಕ್ಷಕರು ಕರತಾಡನಗಳ ಮೂಲಕ ಪ್ರತಿಕ್ರಿಯಿಸಿದರು.

ಈ ಕಾರ್ಯಕ್ರಮದಲ್ಲಿ ಎಲ್ಲ ಅತಿಥಿಗಳಿಗೂ ಸುರಭಿಯ ನೃತ್ಯ ಹಾಗೂ ಅಭಿನಯದ ಬಗ್ಗೆ ಸೊಗಸಾಗಿ ಮಾತನಾಡಿದರು. ದ್ವಿತೀಯಾರ್ಧದ ಕಾರ್ಯಕ್ರಮದಲ್ಲಿ ಸ್ಮರಹರ ಎಂಬ ಕೃತಿಯನ್ನು ನೃತ್ಯ ಮತ್ತು ಸಂಚಾರಿಗಳೊಂದಿಗೆ ಬಹಳ ಸ್ಪಷ್ಟವಾಗಿ ಅಭಿನಯಿಸಿದರು.

ಕು.ಸುರಭಿ, ಶ್ರೀ ವೇಂಕಟೇಶ ಎಂಬ ಮುತ್ತು ಸ್ವಾಮಿ ದೀಕ್ಷಿತರ ಕೃತಿಯಲ್ಲಿ ಶ್ರೀನಿವಾಸ ಹಾಗೂ ಪದ್ಮಾವತಿ ಕಲ್ಯಾಣದ ಸಂಚಾರಿಯನ್ನು ಪ್ರದರ್ಶಿಸುವ ಮೂಲಕ ತಮಗೆ ತಾವೇ ಸಾಟಿ ಎನಿಸಿಕೊಂಡರು. ಈ ಒಂದು ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಆನಂದ ಭಾಷ್ಪ ಹಾಗೂ ದೀರ್ಘ ಕರತಾಡನಗಳ ಮೂಲಕ ಪ್ರತಿಕ್ರಿಯಿಸಿದರು. ರೂಪಕತಾಳದ ಪೂರ್ವಿತಿಲ್ಲಾನವನ್ನು ನರ್ತಿಸಿ ತನ್ನ ಗುರುಗಳ ನೃತ್ಯ ಸಂಯೋಜನೆ ಹಾಗೂ ಅಭಿನಯ ತರಭೇತಿಯ ಉತ್ತಮ ಮಟ್ಟವನ್ನು ವ್ಯಕ್ತಪಡಿಸಿದರು. ಹಾಡುಗಾರಿಕೆಯಲ್ಲಿ ಕರ್ನಾಟಕ ಕಲಾ ಶ್ರೀ ಡಿ.ಎಸ್.ಶ್ರೀವತ್ಸ, ಮೃದಂಗದಲ್ಲಿ ಶ್ರೀ ಹರಿರಂಗಸ್ವಾಮಿ, ವೀಣೆಯಲ್ಲಿ ಶಂಕರ್ರಾಮನ್, ಕೊಳಲಲ್ಲಿ ಕಾರ್ತಿಕ್ಸಾತವಲ್ಲಿ, ರಿದಂ ಪ್ಯಾಡ್ಸ್ನಲ್ಲಿ ಲಕ್ಷ್ಮೀನಾರಾಯಣ ಅಮೋಘ ಸಹಕಾರ ನೀಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!